Sunday, July 14, 2024
Homeಧಾರ್ಮಿಕಶ್ರೀ ಲೋಕನಾಥೇಶ್ವರ ದೇವಸ್ಥಾನ: 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ ಸಂಪನ್ನ

ಶ್ರೀ ಲೋಕನಾಥೇಶ್ವರ ದೇವಸ್ಥಾನ: 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ ಸಂಪನ್ನ

ಶಿರ್ಲಾಲು : ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಶ್ರೀ ದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ ಮತ್ತು ಸುಮಾರು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವವು ಎ.15 ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರುನಲ್ಲಿ ನಡೆಯಿತು.

ವಿಶೇಷವಾಗಿ ತಾಲೂಕಿನ ಸುಮಾರು 45 ತಂಡಗಳು ಭಜನಾ ಕಮ್ಮಟೋತ್ಸವದಲ್ಲಿ ಭಾಗವಹಿಸಿದವು. ದೇವರಿಗೆ ವಿಶೇಷ ರಂಗಪೂಜೆ, ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ ಭಜನಾ ತರಬೇತುದಾರ ವಿ.ಹರೀಶ್ ನೆರಿಯ ಹಾಗೂ ಸಮಿತಿಯ ಮಾಜಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತಯ. ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು, ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಶ್ರೀ ದೇವಿ ಮಹಿಳಾ ಕೇಂದ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಶಿರ್ಲಾಲು ಇದರ ಸಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಪೂಜೆ, ಏಕಾಹ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ, ಸಂಜೆ ಬೆಳ್ಳಿಹಬ್ಬದ ಕಾರ್ಯಕ್ರಮ, ಸಂಜೆ 6ರಿಂದ ಭಜನಾ ಕಮ್ಮಟೋತ್ಸವ ನಡೆಯಿತು. ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಪಾಂಗಾಲ್ದಾಡಿ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಯ ತಂತ್ರಿಗಳು ಆಶೀರ್ವಚನ ನೀಡಿದರು. ಉದ್ಘಾಟನೆಯನ್ನು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದರು.

ಸ್ವಾಗತವನ್ನು ಪ್ರವೀಣ್‌ ಪಡಂಗಡಿ ನೆರವೇರಿಸಿದರು, ಧನ್ಯವಾದವನ್ನು ಪ್ರಸಾದ್‌ ನಲ್ಲಾರ ಗುತ್ತು ಮಾಡಿದರು.

RELATED ARTICLES
- Advertisment -
Google search engine

Most Popular