ಸುಗ್ಗಿ ಹುಣ್ಣಿಮೆಗೆ ಮೂರು ದಿನಗಳ ಕಾಲ ವಿಶೇಷ ವೇಷ ಧರಿಸಿ ಮನೆ ಮನೆಗೆ ಭೇಟಿ ನೀಡಿ ಕದ್ರಿ ಮಂಜುನಾಥನ ತೀರ್ಥ ತಂದು ರಾಶಿ ಪೂಜೆಯು ದಿನಾಂಕ 31/3/2024 ನೇ ಆದಿತ್ಯವಾರ ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು. ಶ್ರೀ ಲೋಕನಾಥೇಶ್ವರ ದೇವರಿಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀದೇವಿ ಮಹಿಳಾ ಕೇಂದ್ರದ ಸದಸ್ಯರು ಊರ ಪರಊರ ಭಕ್ತಾದಿಗಳು ಅನೇಕ ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.