Saturday, April 19, 2025
HomeUncategorizedಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಣಂಕಿಲ ಚಪ್ಪರ ಮುಹೂರ್ತ

ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಣಂಕಿಲ ಚಪ್ಪರ ಮುಹೂರ್ತ

ಪೇಜಾವರ ಮಠದ ಸಾರಥ್ಯದಲ್ಲಿ ಎಪ್ರಿಲ್ 9 ರಿಂದ 13 ರ ವರೆಗೆ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ನಡೆಯಲಿರುವ ಭಕ್ತಿಸಿದ್ಧಾಂತೋತ್ಸವ, ರಾಮೋತ್ಸವ ಮತ್ತು ಶ್ರೀಮನ್ಯಾಯಸುಧಾಮಂಗಳೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಪರಮ ಪೂಜ್ಯ ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ ನೆರವೇರಿತು.

ಮಹೋತ್ಸವ ಸಮಿತಿಯ ಅಧ್ಯಕ್ಷರು ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ಪೆರ್ಣಂಕಿಲ ಶ್ರೀಶ ನಾಯಕ್, ಸಗ್ರಿ ಅನಂತ ಸಾಮಗ, ಸಗ್ರಿ ಆನಂದ ತೀರ್ಥ ಉಪಾಧ್ಯಾಯ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿರುವ ಪೆರಂಪಳ್ಳಿ ವಾಸುದೇವ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ರಮೇಶ್ ನಾಯಕ್, ಸ್ಥಳೀಯರಾದ ಸುರೇಶ್ ತಂತ್ರಿ, ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ರಮಾನಂದ ನಾಯಕ್, ಗುತ್ತಿಗೆದಾರ ಕೃಷ್ಣ ಕುಲಾಲ, ಸತೀಶ್ ನಾಯಕ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular