ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ಉಡುಪಿ ಕಾರ್ತೀಕ ಮಾಸದ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ವಾಗಿ ರುದ್ರಯಾಗ ನಡೆಯಿತು. ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ರುದ್ರಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ನಡೆಸಿಕೊಟ್ಟರು.
ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಸಾರ್ಜನಿಕರಿಗೆ ಸಂಕಲ್ಪ ವಿಧಿಗಳನ್ನು ನಡೆಸಿ ಶತ ರುದ್ರಾಭಿಷೇಶ, ನವಕ ಪ್ರಧಾನ, ಭಜನೆ ಕಾರ್ಯಕ್ರ್ರಮ, ಶ್ರೀದೇವರಿಗೆ ವಿಶೇಷ ಅಲಂಕಾರ, ಯಾಗದ ಪುರ್ಣಾಹುತಿ ಬಳಿಕ, ಮಹಾಪೂಜೆ, ಪಲ್ಲಪೂಜೆ ನೆಡೆಯಿತು , ಸಾರ್ವಜನಿಕ ಮಹಾ ಅನ್ನಸಂತರಪಣೆಯಲ್ಲಿ 3 ಸಾವಿರಕ್ಕೊ ಹೆಚ್ಚಿನ ಭಕ್ತರೂ ಭೋಜನಾ ಪ್ರಸಾದ ಸ್ವೀಕರಿಸದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ರಾಮ್ ಬನ್ನಂಜೆ, ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ, ನಗರ ಸಭಾ ಸದಸ್ಯರಾದ ಟಿ ಜಿ ಹೆಗ್ದೆ, ಸವಿತಾ ಹರೀಶ್ ರಾಂ, ಸಮಿತಿಯ ಸದಸ್ಯರಾದ ವಿಠಲ್ ಶೆಟ್ಟಿ , ಭುಂಜಗ ಶೆಟ್ಟಿ, ಸುಧಾಕರ್ ಮಲ್ಯ, ಸುರೇಶ ಶೇರಿಗಾರ, ದಯಾನಂದ ಕಲ್ಮಾಡಿ ಅನುಪಮಾ ಆನಂದ ಸುವರ್ಣ, ಮಾಧವ ಬನ್ನಂಜೆ, ರವಿರಾಜ್ ಭಟ್, ಪ್ರಭಾಕರ್ ಶೆಟ್ಟಿ, ಅರುಣ್ ಕುಮಾರ್, ಹಾಗೂ ನೂರಾರು ಭಕ್ತರೂ ಉಪಸ್ಥತರಿದ್ದರು.