Thursday, November 7, 2024
Homeಉಡುಪಿಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ

ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ

ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ದಿನಾಂಕ 17/3/2024 ರಂದು ಉಡುಪಿಗೆ ಆಗಮಿಸುತ್ತಿರುವ ಶ್ರೀಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭಕ್ತಿ ಆದರ ಪೂರ್ವಕ ಸ್ವಾಗತಿಸಲಾಗುತ್ತಿದೆ.

ಅಂದು ಬೆಳಿಗ್ಗೆ 8.15 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಶ್ರೀಗಳನ್ನು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ , ವಿ ಹಿಂಪ ರಾಜ್ಯಾಧ್ಯಕ್ಷ ಪ್ರೊ ಎಂ.ಬಿ. ಪುರಾಣಿಕ್ , ಶಾಸಕರಾದ ವೇದವ್ಯಾಸ ಕಾಮತ್ , ಹರೀಶ್ ಪೂಂಜ , ಭರತ್ ಶೆಟ್ಟಿ , ಮಂಜುನಾಥ ಭಂಡಾರಿ , ಮೇಯರ್ ಸುಧೀರ್ ಶೆಟ್ಟಿ , ಕ್ಯಾ ಬ್ರಿಜೇಶ್ ಚೌಟ , ಭಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಲಿರುವರು .
ಬಳಿಕ ವಿಮಾನ ನಿಲ್ದಾಣದ ಹೊರಭಾಗದ ಮುಖ್ಯರಸ್ತೆಯಿಂದ ಬಜ್ಪೆ ಜಂಕ್ಷನ್ – ಕಟೀಲು ದೇವಳದ ಬಳಿ – ಮುಲ್ಕಿ ಬಸ್ ಸ್ಟಾಂಡ್ ಬಳಿ – ಹೆಜಮಾಡಿ ಟೋಲ್ ಗೇಟ್ – ಕಾಪು ಹೊಸಮಾರಿಗುಡಿ ಬಳಿ – ಕಟಪಾಡಿ ಜಂಕ್ಷನ್ -ಉಡುಪಿ ಜೋಡುಕಟ್ಟೆಗಳಲ್ಲಿ ಗಣ್ಯರು ಸಂಘ ಸಂಸ್ಥೆಗಳ ಪ್ರಮುಖರು ಶ್ರೀಗಳನ್ನು ಸ್ವಾಗತಿಸುವರು.

ವಿಮಾನ ನಿಲ್ದಾಣದಿಂದ ಜೋಡುಕಟ್ಟೆಯ ವರೆಗೆ ಮೇಲೆ ಸೂಚಿಸಿದ ಸ್ಥಳಗಳ ವರೆಗೆ ಸರದಿಯೋಪಾದಿಯಲ್ಲಿ ತಲಾ 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳಲ್ಲಿ ಜಾಥಾ ಮೂಲಕ ಶ್ರೀಗಳನ್ನು ಬೀಳ್ಕೊಡುವರು.

ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಸುಮಾರು100 ದ್ವಿಚಕ್ರ ವಾಹನಗಳ ಜಾಥಾದೊಂದಿಗೆ ಕೆ ಎಂ ಮಾರ್ಗ. – ಹಳೆ ಸರ್ವಿಸ್ ಬಸ್ ನಿಲ್ದಾಣ ಬಳಿಯ ಜಟ್ಕಾ ಸ್ಟಾಂಡ್ ಬಳಿ ಬಲಕ್ಕೆ ತಿರುಗಿ ಸಂಸ್ಕೃತ ಕಾಲೇಜಿಗೆ ಬರಲಾಗುವುದು. ಅಲ್ಲಿಂದ ವಾದ್ಯ ಚಂಡೆ ಭಜನೆ ಸಹಿತ ಗಣ್ಯರು ಮತ್ತು ನಾಗರಿಕರೊಂದಿಗೆ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀಕೃಷ್ಣದೇವರು , ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಶ್ರೀ ಪೇಜಾವರ ಮಠ ಪ್ರವೇಶಿಸುವರು . ಶ್ರೀಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ 11.30 ಕ್ಕೆ ಶಾಸಕ ಶ್ರೀ ಯಶ್ಪಾಲ್ ಎ ಸುವರ್ಣರ ಅಧ್ಯಕ್ಷತೆ ಹಾಗೂ ಇತರೆ ಗಣ್ಯರ ಉಪಸ್ಥಿತಿಯಲ್ಲಿ ಸ್ವಾಮೀಜಿಯವರಿಗೆ ಅಭಿವಂದನೆ , ಸಾರ್ವಜನಿಕರಿಂದ ಮಾಲಾರ್ಪಣೆಪೂರ್ವಕ ಗೌರವ ಸಮರ್ಪಿಸಲಾಗುವುದು. ಶ್ರೀಗಳವರ ಅನುಗ್ರಹ ಸಂದೇಶದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ .

RELATED ARTICLES
- Advertisment -
Google search engine

Most Popular