Wednesday, July 24, 2024
Homeಮಂಗಳೂರು'ಶ್ರೀರಾಮ ದರ್ಶನ': ತಾಳಮದ್ದಳೆ ಕಲಾವಿದರಿಗೆ ಗೌರವಾರ್ಪಣೆ

‘ಶ್ರೀರಾಮ ದರ್ಶನ’: ತಾಳಮದ್ದಳೆ ಕಲಾವಿದರಿಗೆ ಗೌರವಾರ್ಪಣೆ

ಮಂಗಳೂರು: ಅಳಪೆ – ಕಣ್ಣೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಕೊಡಕಾಲ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲೋತ್ಸವ ಅಂಗವಾಗಿ ಮಾರ್ಚ್ 13ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)’ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಪ್ರಶಾಂತ ರೈ ಪುತ್ತೂರು (ಭಾಗವತರು), ರೋಹಿತ್ ಉಚ್ಚಿಲ್ (ಚೆಂಡೆ) ಮತ್ತು ಮಯೂರ್ ನಾಯಗ (ಮದ್ದಳೆ) ಭಾಗವಹಿಸಿದ್ದರು.
ಹಿರಿಯ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ (ಬಲರಾಮ), ಶಂಭು ಶರ್ಮ ವಿಟ್ಲ (ಜಾಂಬವಂತ), ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀಕೃಷ್ಣ) ಮತ್ತು ಡಾ.ದಿನಕರ ಎಸ್.ಪಚ್ಚನಾಡಿ (ನಾರದ) ಅರ್ಥಧಾರಿಗಳಾಗಿದ್ದರು. ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆಯಿತ್ತು ಗೌರವಿಸಿದರು. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕಲಾವಿದರ ವಿವರ ನೀಡಿದರು. ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular