Saturday, June 14, 2025
Homeಧಾರ್ಮಿಕಶ್ರೀ ರಾಮಾಂಜನೇಯ ದೇವಸ್ಥಾನ ಕಲ್ಯಾಣಪುರ : ವಸಂತಪೂಜೆ ,ಪಲ್ಲಕ್ಕಿ ಉತ್ಸವ ,ಶತ ಕಲಶಾಭಿಷೇಕ

ಶ್ರೀ ರಾಮಾಂಜನೇಯ ದೇವಸ್ಥಾನ ಕಲ್ಯಾಣಪುರ : ವಸಂತಪೂಜೆ ,ಪಲ್ಲಕ್ಕಿ ಉತ್ಸವ ,ಶತ ಕಲಶಾಭಿಷೇಕ

ಕಲ್ಯಾಣಪುರ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಮೇ 27 ಮತ್ತು 28ರಂದು ಎರಡು ದಿನಗಳ ಆಚರಣೆ ನಡೆಯಿತು. ಸೋಮವಾರ ಸಂಜೆ, ಶ್ರೀ ದೇವರ ಸನ್ನಿಧಿಯಲ್ಲಿ ವಸಂತಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಭಜನಕಾರ್ಯಕ್ರಮ, ಮತ್ತು ಪ್ರಸಾದ ವಿತರಣೆ ನಡೆಯಿತು.

ಮಂಗಳವಾರ ಶ್ರೀ ದೇವರಿಗೆ ಪಂಚಾಮೃತಾ ಅಭಿಷೇಕ, ಶತ ಕಲಶಾಭಿಷೇಕ, ಸಾನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ ಪೂಜೆ ಮತ್ತು ಮಹಾ ಪೂಜೆಯ ಬಳಿಕ ಸಮಾರಾಧನೆ ಮತ್ತು ಪ್ರಸಾದ ವಿತರಣೆ ನಡೆಯಿತು.

ವೇದಮೂರ್ತಿ ಕಾಶೀನಾಥ್ ಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ರಾಮಚಂದ್ರ ಅವಧಾನಿ, ಗಣೇಶ ಭಟ್, ಜಯದೇವ ಭಟ್, ಪವನ್ ಭಟ್, ಜಯದೇವ ಪುರಾಣಿಕ್, ಮತ್ತು ಮಹೇಶ್ ಭಟ್ ನೆರವೇರಿಸಿದರು.

ಈ ಸಂದರ್ಭ, ಶ್ರೀ ರಾಮಾಂಜನೇಯ ಸೇವಾ ಟ್ರಸ್ಟಿನಿಂದ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ₹6 ಲಕ್ಷ ದೇಣಿಗೆಯನ್ನು ದೇವಳದ ಆಡಳಿತ ಮೊಕ್ತೇಸರ್ ಅನಂತ ಪದ್ಮನಾಭ ಕಿಣಿಯವರಿಗೆ ನೀಡಲಾಯಿತು. ನೂರಾರು ಭಕ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular