ಸಜೀಪ ಮೂಡ: ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ದಶಮಾನೋತ್ಸವ ಹಾಗೂ ಮಹಾಶಿವರಾತ್ರಿ ಪೂಜಾ ಉತ್ಸವ ಪೂರ್ವಭಾವಿ ಸಿದ್ಧತಾ ಸಭೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವಸ್ಥಾನ ಸಮಿತಿ ಅಧ್ಯಕ್ಷ ಜಯಶಂಕರ ಭಾಸ್ರಿ ತಾಯ ಪ್ರಮುಖರಾದ ಗಿರೀಶ್ ಪೂಜಾರಿ ರಮೇಶ ಅನ್ನ ಪಾಡಿ ರಾಕೇಶ್ ಶೆಟ್ಟಿ ಬಾಲಕೃಷ್ಣ ಕುಲಾಲ್ ರವಿಚಂದ್ರ ಪಂಬದ ಪ್ರಹ್ಲಾದ್ ಚಂದ್ರಶೇಖರ ಗಾಣಿಗ ಸುಧಾಕರ ಪದ್ಮನಾಭ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು ಪಲಪಂಚಾಮೃತ ಅಭಿಷೇಕ ರಂಗ ಪೂಜೆ ಸಾನಿಧ್ಯ ಕಳಸಾಭಿಷೇಕ ಗಣ ಯಾಗ ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಸoತ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಅನ್ನದಾನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು