Monday, July 15, 2024
Homeಉಡುಪಿಶ್ರೀ ಶನಿ ಕ್ಷೇತ್ರ ಬನ್ನಂಜೆ : ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವ

ಶ್ರೀ ಶನಿ ಕ್ಷೇತ್ರ ಬನ್ನಂಜೆ : ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವ

ಉಡುಪಿ: ಬನ್ನಂಜೆ ಗರಡಿ ರಸ್ತೆ  ಶ್ರೀ ಶನಿ ಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರ ದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ  ಗುರುವಾರ ಶನೈಶ್ವರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. 

ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ ಶ್ರೀ ರಾಮ ವಿಠ್ಠಲ್ ಹಾಗೂ ಶನೈಶ್ವರ ಸ್ವಾಮಿಯ ಸನ್ನಿದಿಯಲ್ಲಿ ಸಗ್ರಹ ಮಖ  ಶನಿಶಾಂತಿ ಪುರಸ್ಪರ ಯಕ್ಷ್ಮ ನಾಶನ ಸೂಕ್ತ ಯಾಗದ ಧಾರ್ಮಿಕ ಪೂಜಾ ವಿದಾನಗಳನ್ನೂ ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಅರ್ಚಕರ ತಂಡ ನೆರವೇರಿಸಿದರು. ಶ್ರೀ ದೇವರಿಗೆ ವಿಶೇಷ ಅಲಂಕಾರ  , ಭಜನಾ ಕಾರ್ಯಕ್ರಮ ಜರಗಿತು.

ಶ್ರೀ ದೇವರ ಸನ್ನಿದಿಯಲ್ಲಿ, ಪಂಚಾಮೃತ ಅಭಿಷೇಕ, ಯಾಗದ ಪೂರ್ಣಾಹುತಿ, ಪಲ್ಲಪೂಜೆ ,ಮಂಡಲಪೂಜೆ  ,  ಉತ್ಸವ ಬಲಿ ಪೂಜೆ ನಡೆಯಿತು. ಮದ್ಯಾಹ್ನ ಮಹಾ ಪೂಜೆಯ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ  ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು. ಸರತಿ ಸಾಲಿನಲ್ಲಿ ಸಾವಿರಾರು  ಭಕ್ತದಿಗಳಿಂದ ಶನಿ ದೇವರಿಗೆ ತೈಲಾಭಿಷೇಕ, ಎಳ್ಳು ದೀಪಾ ಬೆಳಗಿಸಿ ಶನಿಯಾಗದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ  ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ, ಜಯಲಕ್ಷ್ಮೀ  ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ, ಶ್ರೀಪಾದ ಆಚಾರ್ಯ , ಪೂಜಾ ಆಚಾರ್ಯ , ಪ್ರತೀಕ ಆಚಾರ್ಯ ನೂರಾರು ಭಕ್ತರೂ ಉಪಸ್ಥಿತರಿದ್ದರು.                                

RELATED ARTICLES
- Advertisment -
Google search engine

Most Popular