Sunday, July 14, 2024
Homeಧಾರ್ಮಿಕಶ್ರೀ ಶಾರದಾ ಸದ್ವಿದ್ಯಾ ಶಿಬಿರ ಉದ್ಘಾಟನ ಸಮಾರಂಭ ಬಡಾಕೆರೆ

ಶ್ರೀ ಶಾರದಾ ಸದ್ವಿದ್ಯಾ ಶಿಬಿರ ಉದ್ಘಾಟನ ಸಮಾರಂಭ ಬಡಾಕೆರೆ

ಬೈಂದೂರು : ವಿದ್ಯಾರ್ಥಿಗಳಿಗೆ ಸಂಸ್ಕಾರ ಕೊಡದೆ ಜ್ಞಾನ ಮಾತ್ರ ಕೊಟ್ಟರೆ ಧರ್ಮದ ಪಾಲನೆ ಸಾಧ್ಯವಿಲ್ಲ, ಗುರುಕುಲ ನಾಶದಿಂದ ಸಂಸ್ಕಾರದ ಶಿಕ್ಷಣ ನಶಿಸಿದೆ ಎಂದು ಹಾಲಾಡಿ ಪಂಚಾಂಗಕರ್ತರು ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು ಹೇಳಿದರು. ಅವರು ನಾವುಂದ ಬಡಾಕರೆ ಧಾರ್ಮಿಕ ಮಂದಿರದಲ್ಲಿ ಏ.11ರಂದು ನಡೆದ ಶ್ರೀ ಶಾರದಾ ಸದ್ವಿದ್ಯಾ ಶಿಬಿರ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ವೇದಮೂರ್ತಿ ಲೊಕೇಶ ಅಡಿಗ ಪ್ರಾಸ್ತಾವಿಸಿ, ಉತ್ತಮ ವಿದ್ಯಾ ಬುದ್ಧಿಯಿಂದ ಸಂಸ್ಕಾರ ದೊರೆಯುತ್ತದೆ, ವಿದ್ಯೆಯ ಜೊತೆಗೆ ಧಾರ್ಮಿಕ ಶಿಕ್ಷಣ ಸಿಕ್ಕಾಗ ಶ್ರೇಷ್ಠ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ತಪ್ಪನ್ನು ಅರಿತು ತಿದ್ದಿಕೊಳ್ಳುವುದೆ ನಮ್ಮನ್ನು ನಾವು ಶುದ್ಧಿ ಮಾಡಿಕೊಳ್ಳಲು ಇರುವ ಮಾರ್ಗ ಎಂದರು. ಕರ್ಮ, ಗುಣದಿಂದ ವ್ಯಕ್ತಿತ್ವ ರೂಪುಗೊಂಡು ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಎಲ್ಲಕ್ಕಿಂತ ಧರ್ಮದ ಪಾಲನೆ ಮುಖ್ಯವಾಗಿದೆ. ಧರ್ಮದ ಮಾರ್ಗ ತೊರೆದಾಗ ವಿನಾಶಕ್ಕೆ ಮುನ್ನುಡಿ ಬರೆಯುತ್ತದೆ ಎಂದು ನಾಗಯಕ್ಕೇ ಪಾತ್ರಿ ರಾಜೇಶ್ ಹೆಬ್ಬಾರ್ ಹೇಳಿದರು.

ವೇ.ಮೂ. ಸೀತಾರಾಮ ಆಡಿಗರು ಬೈಂದೂರು, ಸಾವಿರಕ್ಕೂ ಹೆಚ್ಚು ಚಂಡಿಕಾ ಹೋಮ ಹವನ ಕಾರ್ಯ ನಡೆಸಿದ ವೇ.ಮೂ ನಾಗೇಶ್ ಭಟ್ಟರು ದೇವಲ್ಕುಂದ, ಮಾಧವ ಮಂಜರು, ಅರೆಹೊಳೆ ವಿಶ್ರಾಂತ ಅಧ್ಯಾಪಕರು ಅವರನ್ನು ಸಮ್ಮಾನಿಸಲಾಯಿತು.

ವೇ.ಮೂ. ನಾಗೇಂದ್ರ ಹೆಬ್ಬಾರ್ ಬವಲಾಡಿ, ರಂಗೋಲಿ ಚಿತ್ರಕಾರರು ಸುಧೀಂದ್ರ ಐತಾಳ್ ಸಾಲಿಗ್ರಾಮ, ಪ್ರಾಣಿ ಪಕ್ಷಿಗಳ ಸಂರಕ್ಷಕರು ಮತ್ತು ಉರೆಗೆ ತಜ್ಞರು. ಮಂಜುನಾಥ ಮರವಂತೆ, ಕವಿಗಳು ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಶ್ರುತಿಸರ್ವಸ್ವ ಗುರುಕುಲಮ್ ವೆಂಕಟೇಶ್ ಮೂರ್ತಿ, ಶ್ರೀಪತಿ ಭಟ್ ಅವರನ ಅಭಿನಂದಿಸಲಾಯಿತು. ಮಾಧವ ಅಡಿಗ ಬಡಾಕೆರೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜೇಶ್ ಕಾರಂತ್ ಉಪ್ಪಿನಕುದ್ರು ಮಾಜಿ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಕೊಲ್ಲೂರು, ನಾಗರಾಜ ರಾವ್ ಬೈಕಾಡಿ, ನಿವೃತ್ತ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್ ಯರ್ಲಪಾಡಿ, ಕಾರ್ಕಳ ಡಾ| ರಾಜೇಶ್ ಬಾಯರಿ, ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಕಳಿ ಅಲೂರು, ವೇದಮೂರ್ತಿ ನಾಗೇಂದ್ರ ಅಡಿಗ, ಮಂಜುನಾಥ ಅಡಿಗ, ಪ್ರಕಾಶ್ ಅಡಿಗ, ಜರ್ನಾದನ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ವೇದಮೂರ್ತಿ ಲಕ್ಷ್ಮೀಶ್ ಅಡಿಗ ಸ್ವಾಗತಿಸಿದರು. ಎನ್.ಆರ್. ದಾಮೋದರ ಶರ್ಮಾ ಶ್ರೀ ನವಾಕ್ಷರೀ, ಬಾರ್ಕೂರು ನಿರೂಪಿಸಿದರು. ಮಹೇಶ್ ಹೆಗ್ಡೆ ವಂದಿಸಿದರು.

RELATED ARTICLES
- Advertisment -
Google search engine

Most Popular