Monday, December 2, 2024
Homeಉಡುಪಿಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

ಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ


ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ, ದೇವಿ ಅನುಗ್ರಹಿತ ಭಕ್ತ ಶ್ರೀ ಶ್ರೀ ರಮಾನಂದ ಗುರೂಜಿ ಇದೆ ತಿಂಗಳ ತಾರೀಕು 21ರ ಶನಿವಾರದಿಂದ ತಾರೀಕು 24ರ ಮಂಗಳವಾರ ತನಕ ಮುಂಬೈಯಲ್ಲಿ ಭಕ್ತರ ಬೇಟಿಗೆ ಲಭ್ಯವಿರುತ್ತಾರೆ..
ದೇವಿ ಅನುಗ್ರಹಿತ ಭಕ್ತನಾಗಿ, ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟ ದಲ್ಲಿರುವ ಭಕ್ತರ ಸಂಕಷ್ಟ ನಿವಾರಿಸಿ ಭಕ್ತ ಜನರ ಮಾತನಾಡುವ ಶಕ್ತಿ ಎನಿಸಿದ ಶ್ರೀ ಗುರೂಜಿಯವರು ತಾರೀಕು 21 ರಿಂದ 23ರ ತನಕ ಲೋವರ್ ಪರೇಲ್ ನಲ್ಲಿರುವ ಸೈಂಟರಿಜಿಸ್(St. Regis. ) ಪಂಚತಾರಾ ಹೋಟೆಲಿನಲ್ಲಿ
ವಾಸ್ತವ್ಯ ಹೂಡಲಿದ್ದಾರೆ.
ತಾರೀಕು 23 ರ ಮಧ್ಯಾಹ್ನದಿಂದ ದಹಿಸರ್ ನಲ್ಲಿರುವ ಹೋಟೆಲ್ ಸನ್ ಶೈನ್ ನಲ್ಲಿ ವಾಸ್ತವ್ಯ ಹೂಡಲಿದ್ದು, ವಸೈನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ..
ಶ್ರೀ ಗುರೂಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 63604595699342749650 ಮುಂಗಡ ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular