ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ದೇವಿ ಅನುಗ್ರಹಿತ ಭಕ್ತ ಶ್ರೀ ಶ್ರೀ ರಮಾನಂದ ಗುರೂಜಿ ಇದೇ ತಿಂಗಳ ತಾರೀಕು 23ರ ಶನಿವಾರದಿಂದ 24ರ ಭಾನುವಾರ ತನಕ ಹಾಗೂ 27ರ ಬುಧವಾರ ಮುಂಬೈನ ಲೋವರ್ ಪರೀಲಿನಲ್ಲಿರುವ ಸೈಂಟ್ ರಿಜಿಸ್(St. Regis) ಪಂಚತಾರಾ ಹೊಟೇಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾ.26ರಂದು ಇಂದೋರಿಗೆ ಭೇಟಿ ನೀಡಲಿದ್ದು ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟ ಕೊಳಗಾದವರ ಸಂಕಷ್ಟ ನಿವಾರಿಸಿ ಭಕ್ತ ಜನರ ಮಾತನಾಡುವ ಶಕ್ತಿ ಎನಿಸಿದ ಗುರೂಜಿಯವರ ಭೇಟಿಯನ್ನು ಬಯಸುವ ಭಕ್ತಾದಿಗಳು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 9342749650 / 6360408747 ನಲ್ಲಿ ಸಂಪರ್ಕಿಸಿ ಮುಂಗಡ ಹೆಸರು ನೋಂದಾಯಿಸಬೇಕೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.