ಈಗಾಗಲೇ ವಿಶಿಷ್ಟ ಕಾರ್ಯಕ್ರಮ ಸೇವೆಗಳಿಂದ ಗುರುತಿಸಿಕೊಂಡ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಗುರುಗಳ ಜನ್ಮದಿನ ನವಂಬರ್ 12 ಈ ದಿನದಂದು ಸಾವಿರಾರು ಅಭಿಮಾನಿ ಭಕ್ತರು ಗುರುಗಳ ಆಶೀರ್ವಾದವನ್ನು ಪಡೆಯಲು ಮಠಕ್ಕೆ ಬರುತ್ತಿದ್ದರು. ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ತಮ್ಮೆದೆ ಶೈಲಿಯಲ್ಲಿ ಅವುಗಳ ಸಂರಕ್ಷಣೆ ಮೋಕ್ಷಗಳನ್ನು ಮಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಹೃದಯವಂತ ಪ್ರಾಣಿ ಪ್ರಿಯರು ಬೀದಿ ಶ್ವಾನಗಳನ್ನು ರಕ್ಷಿಸಿ ಸಂರಕ್ಷಿಸಲು ಸಂರಕ್ಷಣ ಕೇಂದ್ರಗಳ ಮುಖೇನ ಬೀದಿ ಶ್ವಾನಗಳ ಹಾರೈಕೆ ಮಾಡುತ್ತಿದ್ದು ಅವರು ಮಾಡುವ ಪುಣ್ಯದ ಸೇವೆಗೆ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಮತ್ತು ಶ್ವಾನಗಳ ಸಂತತಿ ಉಳಿಸಲು ಪ್ರತಿಯೊಬ್ಬ ಪ್ರಜೆಯು ಮುಂದಾಗ ಬೇಕೆಂಬುದಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರು ತಮ್ಮ ಅಭಿಮಾನಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದು.
2024 ನವಂಬರ್ 12 ರ ಬೆಳಿಗ್ಗೆ 11:30ಕ್ಕೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹೃದಯವಂತ ಪ್ರಾಣಿ ಪ್ರಿಯರ ಉಪಸ್ಥಿತಿಯಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಗೆ ಚಾಲನೆ ನೀಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.