Friday, March 21, 2025
Homeಧಾರ್ಮಿಕಶ್ರೀ ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಹೊರೆ ಕಾಣಿಕೆ ಸಮಿತಿ ಸಭೆ

ಶ್ರೀ ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಹೊರೆ ಕಾಣಿಕೆ ಸಮಿತಿ ಸಭೆ

ಶ್ರೀ ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಹೊರೆ ಕಾಣಿಕೆ ಸಮಿತಿ ಸಭೆಯು ಶ್ರೀದೇವಳದ ಆವರಣದಲ್ಲಿ ದಿನಾಂಕ 6-3-24 ಬುಧವಾರದಂದು ಸಂಜೆ 4 ಗಂಟೆಗೆ ನಡೆಯಿತು.

ಸುಮಾರು 89 ಜನ ಭಗವದ್ಭಕ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಾಧು ಸಾಲಿಯನ್, ರಮೇಶ್ ಕೋಟ್ಯಾನ್, ಪಾಂಡುರಂಗ ಮಲ್ಪೆ, ನಾಗರಾಜ ಮೂಲಿಗಾರ್, ಶ್ರೀನಿವಾಸ ಭಟ್, ಶಶಿಧರ ಅಮೀನ್, ಪ್ರಕಾಶ್ ಕೊಡವೂರು, ಹಯವದನ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ಹೊರ ಕಾಣಿಕೆ ಸಮಿತಿ ಅಧ್ಯಕ್ಷ ರಮೇಶ್ ಕೋಟ್ಯಾನ್ ನೇತೃತ್ವದಲ್ಲಿ ತಯಾರಿಗಳ ಬಗ್ಗೆ ಧನಂಜಯರವರು ಸಭೆಗೆ ಮಾಹಿತಿ ನೀಡಿದರು.

ಮಾರ್ಚ್ 19 ರಂದು ನಡೆಯುವ ಈ ವೈಭವದ ಹಸಿರು ಹೊರೆ ಕಾಣಿಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಸಂಜೆ ಗಂಟೆ 4.00ರಿಂದ ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಅದ್ದೂರಿಯಿಂದ ನಡೆಸುವ ಬಗ್ಗೆ ಸಭೆಯಲ್ಲಿ ವಿಸೃತವಾಗಿ ಚರ್ಚಿಸಲಾಯಿತು.

ಈಗಾಗಲೇ 35 ಸಂಘ-ಸಂಸ್ಥೆಗಳು, ಭಜನಾ ಮಂಡಳಿಗಳು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಹೆಸರನ್ನು ನೋಂದಾಯಿಸಿದ್ದು, ಇನ್ನೂ ಮೂವತ್ತಕ್ಕೂ ಮಿಕ್ಕಿ ಸಂಘ-ಸಂಸ್ಥೆಗಳು ಸೇರ್ಪಡೆಯಾಗಲಿವೆ. ಒಟ್ಟು 65ಕ್ಕೂ ಮಿಕ್ಕಿ ಸಂಸ್ಥೆಗಳು ಭಾಗವಹಿಸಲಿವೆ ಎಂದು ರಮೇಶ್ ಕೋಟ್ಯಾನ್ ಸಭೆಗೆ ತಿಳಿಸಿದರು.

ಶಶಿಧರ್ ಅಮೀನ್ ನೇತೃತ್ವದಲ್ಲಿ ಸುಮಾರು 100 ಚಂಡೆಗಳ ವಾದನ ಮೊಳಗಲಿದೆ ಎಂದು ಕಿಶೋರ್ ತಿಳಿಸಿದರು.

ಭಗಿನಿಯರು ತಮ್ಮ ತಮ್ಮ ಮನೆಗಳಿಂದ ಕಲಶದ ಬಿಂದಿಗೆ ತರಬೇಕು. ಅದಕ್ಕೆ ಪೂರಕವಾಗಿ ತೆಂಗಿನಕಾಯಿ, ಹೂವು ಸಮಿತಿಯಿಂದ ಒದಗಿಸಲಾಗುವುದೆಂದು ಪಾಂಡುರಂಗ ಮಲ್ಪೆ ತಿಳಿಸಿದರು.

ಮೆರವಣಿಗೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮೈಕ್ ಹಾಗೂ ಸಭಾ ಕಾರ್ಯಕ್ರಮಗಳಿಗೆ ಅನುಮತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಬೇಕು. ಈ ಜವಾಬ್ದಾರಿಯನ್ನು ಶರತ್ ಮಲ್ಪೆ ಅವರಿಗೆ ವಹಿಸಲಾಯಿತು.

ಮೆರವಣಿಗೆಯ ಮಾರ್ಗ ಮಧ್ಯೆ ನೀರಿನ ವ್ಯವಸ್ಥೆ, ಸ್ವಚ್ಛತೆ, ಸಿಡಿಮದ್ದುಗಳ ವ್ಯವಸ್ಥೆಯನ್ನು ಮಾಡಲಾಗುವುದೆಂದು ತಿಳಿಸಲಾಯಿತು.

ಶ್ರೀ ಶಂಕರನಾರಾಯಣ ದೇವಳದ ಬಿರುದು ಬಾವಲಿಗಳು, ವಿವಿಧ ತಟ್ಟಿರಾಯಗಳು, ಬ್ಯಾಂಡ್ ಮುಂತಾದ ವಾದ್ಯಗಳು, ಚಂಡೆ ವಾದನಗಳು ಮೆರವಣಿಗೆಯ ಸಂಭ್ರಮವನ್ನು ಹೆಚ್ಚಿಸಲಿವೆ ಎಂದು ಸಾಧು ಸಾಲಿಯನ್ ತಿಳಿಸಿದರು.

ವೀರ ಮಾರುತಿ ಭಜನಾ ಮಂಡಳಿ ಗರಡಿಮಜಲು, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಅಯ್ಯಪ್ಪ ಮಂದಿರ ಮಲ್ಪೆ, ಶನೀಶ್ವರ ಭಜನಾ ಮಂಡಳಿ ಹೀಗೆ ನಾಲ್ಕು ಕಡೆಗಳಲ್ಲಿ ಹೊರೆ ಕಾಣಿಕೆಗೆ ಸಾರ್ವಜನಿಕರು ತಮ್ಮ ಸೇವಾ ರೂಪದ ಹೊರೆ ಕಾಣಿಕೆಯನ್ನು ಸಲ್ಲಿಸಬಹುದು ಎಂದು ಕೋಟ್ಯಾನ್ ತಿಳಿಸಿದರು.

ಕೊಡವೂರಿನಿಂದ ಗರಡಿ ಮಜಲು ಮಾರ್ಗದಲ್ಲಿ ವಾಹನವನ್ನು ಸರತಿ ಸಾಲಿನಲ್ಲಿ ಎರಡು ಗಂಟೆಗೆ ನಿಲ್ಲಿಸುವಂತೆ, ಅಲ್ಲದೆ ದೇವಳದ ಮುಂಭಾಗದಿಂದ ಅದ್ದೂರಿಯ ಶೋಭ ಯಾತ್ರೆ 4 ಗಂಟೆಗೆ ಪ್ರಾರಂಭವಾಗಲಿದೆ ಎಂದು ತಿಳಿಸಲಾಯಿತು.

ಪ್ರಕಾಶ್ ಕೊಡವೂರು ಸ್ವಾಗತಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular