ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ( ರಿ.) ಮಾರುತಿನಗರ ನರಿಕೊಂಬು ಪಾಣೆಮಂಗಳೂರು ಇದರ ಶ್ರೀ ವೀರಮಾರುತಿ ಮಂದಿರದ 16 ನೇ ವರ್ಷದ ಪ್ರತಿಷ್ಟಾ ವರ್ಧoತೂತ್ಸವ ಕಾರ್ಯಕ್ರಮವು ವೇದಮೂರ್ತಿ ಶ್ರೀ ರಾಜಗೋಪಾಲಾಚಾರ್ ನರಿಕೊಂಬು ಇವರ ಪೌರೋಹಿತ್ಯದಲ್ಲಿ ಜರಗಿತ್ತು.
ಶ್ರೀ ಮಾರುತಿ ದೇವರಿಗೆ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ( ರಿ.) ಮಾರುತಿನಗರ ನರಿಕೊಂಬು ಇದರ ಅಧ್ಯಕ್ಷರಾದ ಹರೀಶ ಏನ್, ಪದಾಧಿಕಾರಿಗಳು, ಸದಸ್ಯರುಗಳು, ಶ್ರೀ ವೀರಮಾರುತಿ ಮಹಿಳಾ ಮಂಡಳಿ ಸದಸ್ಯರುಗಳು, ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ( ರಿ.) ಮಾರುತಿನಗರ ನರಿಕೊಂಬು ಪಾಣೆಮಂಗಳೂರು ಇದರ ಶ್ರೀ ವೀರಮಾರುತಿ ಮಂದಿರದ 16 ನೇ ವರ್ಷದ ಪ್ರತಿಷ್ಟಾ ವರ್ಧoತೂತ್ಸವ ಕಾರ್ಯಕ್ರಮ
RELATED ARTICLES