Saturday, December 14, 2024
Homeಬಂಟ್ವಾಳಶ್ರೀ ವೆಂಕಟರಮಣಸ್ವಾಮಿ ಕಾಲೇಜು :ಕಾನೂನು ಅರಿವು ಕಾರ್ಯಕ್ರಮ

ಶ್ರೀ ವೆಂಕಟರಮಣಸ್ವಾಮಿ ಕಾಲೇಜು :ಕಾನೂನು ಅರಿವು ಕಾರ್ಯಕ್ರಮ

ಬಂಟ್ವಾಳ: ಶಿಷ್ಟಾಚಾರದಿಂದ ಹೊರತಾದ ಎಲ್ಲವೂ ಭ್ರಷ್ಟಾಚಾರವೆನಿಸುತ್ತದೆ. ಜೀವನದಲ್ಲಿ ಮೌಲ್ಯಗಳನ್ನು ಅನುಸರಿಸಿದಾಗಲೇ ಅದಕ್ಕೆ ಬೆಲೆ ಬರುವುದು ಎಂದು ಕೃಷ್ಣಮೂರ್ತಿ ಎನ್. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಬಂಟ್ವಾಳ, ಇವರು ನುಡಿದರು.
ಇವರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಲೋಕಾಯುಕ್ತ ಇಲಾಖೆ, ನಗರ ಪೋಲೀಸ್ ಠಾಣೆ ಹಾಗೂ ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ “ಜಾಗೃತಿ ಅರಿವು ಸಪ್ತಾಹ – 2024” ಹಾಗೂ “ಹಿರಿಯ ನಾಗರಿಕರ ದಿನಾಚರಣೆ”ಯ ಪ್ರಯುಕ್ತ ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳದಲ್ಲಿ ಆಯೋಜಿಸಿದ್ದ ‘ಕಾನೂನು ಅರಿವು
ಕಾರ್ಯಕ್ರಮ’ದಲ್ಲಿ ಮಾತನಾಡಿದರು. ವ್ಯಕ್ತಿಯ ಜನನದಿಂದ ಮರಣದವರೆಗೂ ಕಾನೂನಿನ ವ್ಯಾಪ್ತಿಗೊಳಪಡುತ್ತಾನೆ. ಅದರ ತಿಳುವಳಿಕೆ ಎಲ್ಲರಿಗೂ ಅಗತ್ಯವಾದುದು ಎಂದು ದಿವಾಕರ್ ಮುಗುಳಿಯ, ಉಪತಹಸೀಲ್ದಾರರು, ಬಂಟ್ವಾಳ ಇವರು ತಿಳಿಸಿದರು. ಮಕ್ಕಳಿಂದ ಪೋಷಕರವರೆಗೂ ಕಾನೂನಿನ ನೆರವನ್ನು ತಾಲೂಕು ಕಾನೂನು ಸಮಿತಿ ನೀಡಲು ಸದಾ ಸಿದ್ಧವಿದೆ ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಹರಿಣಿ ಕುಮಾರಿ, ಸಹಾಯಕ ಸರ್ಕಾರಿ ಅಭಿಯೋಜಕರು, ತಾಲೂಕು ಕಾನೂನು ಸೇವೆಗಳ ಸಮಿತಿ ಇವರು ಕರೆನೀಡಿದರು.
ರಾಮಕೃಷ್ಣ, ಆರಕ್ಷಕ ನಿರೀಕ್ಷಕರು, ಬಂಟ್ವಾಳ ನಗರ ಪೋಲೀಸ್ ಠಾಣೆ ಇವರು ಮಾತನಾಡುತ್ತಾ ಅಪರಾಧಗಳು ನಡೆದಾಗ ಪಶ್ಚಾತ್ತಾಪ ಪಡುವುದಕ್ಕಿಂತ ಜಾಗೃತವಾಗಿದ್ದು ಅಪರಾಧಗಳಿಂದ ದೂರವಿರಬೇಕೆಂದು ನುಡಿದರು. ಬದಲಾವಣೆ ಶಿಕ್ಷೆನೀಡುವುದರಿಂದ ಆಗಬಾರದು ಅದು ಸ್ವಭಾವದಿಂದಲೇ ಆಗಬೇಕು ಎಂದು ಸುರೇಶ್ ಕುಮಾರ್ ಪಿ, ಪೋಲೀಸ್ ನಿರೀಕ್ಷಕರು, ಲೋಕಾಯುಕ್ತ ಇಲಾಖೆ, ಮಂಗಳೂರು ವಿಭಾಗ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ
ಕರೆನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪ್ರಸಾದ್ ಕುಮಾರ್ ರೈ, ಹಿರಿಯ ನ್ಯಾಯವಾದಿಗಳು, ಬಂಟ್ವಾಳ ಇವರು ಮಾತನಾಡುತ್ತಾ ಭ್ರಷ್ಟಾಚಾರ ಸದೃಢ ದೇಹಕ್ಕೆ ಬಂದಿರುವ ರೋಗವಿದ್ದಂತೆ. ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಿದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸದಂತಾಗುತ್ತದೆ. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್.ರವರು ರಾಷ್ಟೀಯ ಭದ್ರತೆ ಹಾಗೂ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವು ಮಾರಕವಾದುದು. ಭಾರತವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ಮಾಡುವುದು ನಮ್ಮ ಕೈಯಲ್ಲಿದೆ ಎಂದರು.

RELATED ARTICLES
- Advertisment -
Google search engine

Most Popular