ಇಳಂತಿಲ : ನ 17 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಗುರುವಾಯನಕೆರೆ ವ್ಯಾಪ್ತಿಯ ಕಣಿಯೂರು ವಲಯದ ಅಂಡೆತಡ್ಕ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ನಡೆಯುವಂತಹ ಸೃಜನಾ ಶೀಲಾ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮ ದಲ್ಲಿ ಯಶಸ್ವಿ ಕೇಂದ್ರದ 15 ಕುಟುಂಬಗಳಿಗೆ ಒಟ್ಟು 300 ಮಲ್ಲಿಗೆ ಗಿಡಗಳನ್ನು ವಿತರಿಸಲಾಯಿತು ಸ್ವ ಉದ್ಯೋಗ ಮಾಡಲು ಮಾಹಿತಿ ನೀಡಲಾಯಿತು ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್, ಒಕ್ಕೂಟದ ಅಧ್ಯಕ್ಷರು, ಶಾಲಾ ಶಿಕ್ಷಕರು, ಪ್ರಗತಿ ಪರ ಕೃಷಿಕರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಸೇವಾಪ್ರತಿನಿಧಿ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.