ಏಪ್ರಿಲ್ 21ರಿಂದ 27ರ ತನಕ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೀಣಾ ಬನ್ನಂಜೆ ನಡೆಸಿಕೊಡಲಿರುವ ಶ್ರೀಮದ್ ಭಾಗವತ ಸಪ್ತಾಹ ಪೂರ್ವಭಾವಿ ಸಮಾಲೋಚನಾ ಸಭೆ ಶ್ರೀರಾಮ ಭಜನಾ ಮಂದಿರ ಕೋಟೆ ಕಣಿ ಶ್ರೀ ರಾಮನವಮಿಯ ಪರ್ವಕಾಲದಲ್ಲಿ ಭಾನುವಾರದಂದು ಜರಗಿತ್ತು. ಭೂಮಿ ಭಾರ-ಹರಣಕ್ಕಾಗಿ ಶ್ರೀ ದೇವರ ಅವತಾರದ ಪುಣ್ಯ ಕಥೆ ಕೇಳಿ ನಾವೆಲ್ಲ ಪುನೀತರಾಗೋಣ ಮಂಗಳಪ್ರದವು ಸುಖಪ್ರದವು ಸಂಸಾರ ಬಾದೆಯಿಂದ ವಿಮೋಚನೆ ಭಾಗವತ ಪಠಣ ಮತ್ತು ಶ್ರವಣದಿಂದ ಪ್ರಾಪ್ತಿಯಾಗುತ್ತದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಿನಂತಿಸಿದರು ಭಾಗವತ ಪ್ರವಚನ ಸಪ್ತಾಹ ಸಮಿತಿ ಅಧ್ಯಕ್ಷ ಯಶವಂತ ದೇರಾ ಜೆ ಗುತ್ತು ಕಾರ್ಯಕ್ರಮ ರೂಪುರೇಷೆ ಹಾಗೂ ಏಳು ದಿನ ಫಲಹಾರ ಹಾಗೂ ಊಟ ವ್ಯವಸ್ಥೆಯೊಂದಿಗೆ ಜರಗಲಿದೆ. ಎಂಬುದಾಗಿ ವಿವರಿಸಿದ್ದರು ಭಜನಾ ಮಂದಿರದ ಪದಾಧಿಕಾರಿಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.