ದಾವಣಗೆರೆ : ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ 5 ದಶಕಗಳಿಂದ ಸಾಧನೆಗೈದ ದಾವಣಗೆರೆಯ ನಲ್ಲೂರು ಲಕ್ಷ್ಮಣರಾವ್ ರೇವಣಕರ್‌ರವರಿಗೆ “ಸರಸ್ವತಿ ಸಂಸ್ಕೃತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ಘೋಷಿಸಿ ಮಾರ್ಚ್ 9 ರಂದು ಶನಿವಾರ ಸಂಜೆ 6ಗಂಟೆಗೆ ದಾವಣಗೆರೆಯ ವಿನೋಬನಗರ ಒಂದನೇ ಮುಖ್ಯರಸ್ತೆಯಲ್ಲಿರುವ ಗೌರಮ್ಮ ನರಹರಿಶೇಟ್ ಮಿನಿ ಸಭಾಂಗಣದಲ್ಲಿ ಸನ್ಮಾನಿಸಿ
ಪುರಸ್ಕರಿಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೇ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಆಧ್ಯಾತ್ಮ ಸಾಮಾಜಿಕ ಕಾಳಜಿಯ, ಸಮಾಜ ಸೇವೆ ಅನೇಕ ಅಂಗವಿಕಲರಿಗೆ ಉಚಿತ ಆಯುರ್ವೇದ ಚಿಕಿತ್ಸೆ, ಅಧ್ಯಾತ್ಮ ಪರಂಪರೆಯ ಧಾರ್ಮಿಕ ಸುಭಾಷಿತ ಸಂಗ್ರಹದ ಹೊತ್ತಿಗೆಗಳ ಪ್ರಕಟಣೆಗಳೊಂದಿಗೆ ಸಾಧನೆ ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ
ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ನಾಗೇಶ್ ಸಂಜೀವ ಕಿಣಿ ತಿಳಿಸಿದ್ದಾರೆ. ನಿಸ್ವಾರ್ಥ ಸೇವೆಯ ಈ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಅವರ ಅಭಿಮಾನಿಗಳು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭ ಹಾರೈಸಬೇಕಾಗಿ ಪ್ರತಿಷ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ರಾಘವೇಂದ್ರ ಶೆಣೈ ವಿನಂತಿಸಿದ್ದಾರೆ.