ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರತೀ ವರ್ಷದಂತೆ ಈ ವರ್ಷವೂ 2023- 24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕಪಡೆದ ಮಕ್ಕಳಿಗೆ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿ, ಒಟ್ಟು ಅಂಕ 625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ, ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 120ರಿಂದ 124 ಅಂಕ ಪಡೆದ ಮಕ್ಕಳಿಗೆ ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಕನ್ನಡ- ಕುವರ-ಕುವರಿ” ಜಿಲ್ಲಾ ಪ್ರಶಸ್ತಿ ನಾಡಿನ ಖ್ಯಾತ ಹಿರಿಯ, ಗಣ್ಯ ಮಾನ್ಯರ ಸಮ್ಮುಖದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದಿದ್ದು ಸಂಸ್ಥೆಯ ಸನ್ಮಾನದ ಪ್ರವೇಶ ಪತ್ರ ಪಡೆದು 15 ಜೂನ್ 2024 ರೊಳಗೆ ಭರ್ತಿ ಮಾಡಿಬೆಳ್ಳಿ ಹಬ್ಬದ ಸಂಭ್ರಮಸಾಂಸ್ಕೃತಿಕ ಸಂಸ್ಥೆ, ದಾವಣಗೆರೆಕೊಡಬಹುದು ಹೆಚ್ಚಿನ ಮಾಹಿತಿಗೆ 9538732777, 9481722376, 9743897578 ಈ ಸನೀಹವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ವಿನಂತಿಸಿದ್ದಾರೆ. ಸಂಸ್ಥೆಯ ಪೂರ್ಣ ಪ್ರಮಾಣದ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ‘ಕನ್ನಡ ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ, (ಲಾಯರ್ ರೋಡ್) ಕೆ.ಬಿ. ಬಡಾವಣೆ, ಜಯದೇವ ವೃತ್ತದ ಹತ್ತಿರ, ದಾವಣಗೆರೆ – 577002.