ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿ ಪ್ರಥಮ; ದ.ಕ. ದ್ವಿತೀಯ; ಯಾವ್ಯಾವ ಜಿಲ್ಲೆಯಲ್ಲಿ ರಿಸಲ್ಟ್ ಹೇಗಿದೆ ನೋಡಿ

0
349

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಬೆಳಗ್ಗೆ ಪ್ರಕಟಗೊಂಡಿದೆ. https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ.

ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಮತ್ತು ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಶೇ. 96 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶೇ. 92.12 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೊನೆಯ ಸ್ಥಾನ ಗಳಿಸಿ ಯಾದಗಿರಿ ಜಿಲ್ಲೆಯಲ್ಲಿ ಶೇ. 50.59 ರಷ್ಟು ವಿದ್ಯಾರ್ಥಿಗಳಳು ಮಾತ್ರ ಉತ್ತೀರ್ಣರಾಗಿದ್ದಾರೆ.

631204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 73.40 ಫಲಿತಾಂಶ ದಾಖಲಾಗಿದೆ.

ಬಾಗಲಕೋಟೆಯ ಅಂಕಿತಾ ಬಸಪ್ಪ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮೇಧಾ ಪಿ. ಶೆಟ್ಟಿ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  

ಇನ್ನುಳಿದಂತೆ ಯಾವ್ಯಾವ ಜಿಲ್ಲೆಗಳು ಎಷ್ಟು ಫಲಿತಾಂಶ ದಾಖಲಿಸಿವೆ ಎಂಬ ವಿವರ ಇಲ್ಲಿದೆ:

ಉಡುಪಿ – 94 ಶೇಕಡಾ
ದಕ್ಷಿಣ ಕನ್ನಡ- 92. 12 ಶೇಕಡಾ
ಶಿವಮೊಗ್ಗ-88.67 ಶೇಕಡಾ
ಕೊಡಗು-88.67 ಶೇಕಡಾ
ಉತ್ತರ ಕನ್ನಡ- 86.54 ಶೇಕಡಾ
ಹಾಸನ- 86.28 ಶೇಕಡಾ
ಮೈಸೂರು-85.5
ಶಿರಸಿ-84.64
ಬೆಂಗಳೂರು ಗ್ರಾಮೀಣ-83.67
ಚಿಕ್ಕಮಗಳೂರು-83.39
ವಿಜಯಪುರ-79.82
ಬೆಂಗಳೂರು ದಕ್ಷಿಣ-79
ಬಾಗಲಕೋಟೆ-77.92
ಬೆಂಗಳೂರು ಉತ್ತರ-77.09
ಹಾವೇರಿ- 75.85
ತುಮಕೂರು-75.16
ಗದಗ-74.76
ಚಿಕ್ಕಬಳ್ಳಾಪುರ- 73.61
ಮಂಡ್ಯ-73.59
ಕೋಲಾರ-73.57
ಚಿತ್ರದುರ್ಗ-72.85
ಧಾರವಾಡ-72.67
ದಾವಣಗೆರೆ-72.49
ಚಾಮರಾಜನಗರ-71.59
ಚಿಕ್ಕೋಡಿ-69.82
ರಾಮನಗರ-69.53
ವಿಜಯನಗರ-65.61
ಬಳ್ಳಾರಿ-64.99
ಬೆಳಗಾವಿ-64.93
ಮಧುಗಿರಿ-62.44
ರಾಯಚೂರು-61.2
ಕೊಪ್ಪಳ-61.16
ಬೀದರ್-57.52
ಕಲಬುರಗಿ-53.04
ಯಾದಗಿರಿ-50.59

LEAVE A REPLY

Please enter your comment!
Please enter your name here