Saturday, July 20, 2024
Homeರಾಜ್ಯಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಎಸ್.ಪಿ.ಎ.ಎನ್.ಆರ್. ಪ್ರತಿಷ್ಠಾನ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಎಸ್.ಪಿ.ಎ.ಎನ್.ಆರ್. ಪ್ರತಿಷ್ಠಾನ

ದಾವಣಗೆರೆ ; ಮಾರ್ಚ್ 25ರಿಂದ ಏಪ್ರಿಲ್ 6 ರವರೆಗೆ2023-24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಮಹತ್ವಪೂರ್ಣ ಪರೀಕ್ಷೆ ಇದ್ದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ, ಅಕ್ಷರಾಭ್ಯಾಸ ನೀಡಿದ ಶಿಕ್ಷಕ-ಶಿಕ್ಷಕಿಯರಿಗೆ, ಹೆತ್ತ ತಂದೆ-ತಾಯಿಯವರಿಗೆ ಹುಟ್ಟಿದ ಊರಿಗೆ ಒಳ್ಳೆಯ ಹೆಸರು ತಂದು ಕೊಡಲಿ ಎಂದು ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನ ಸಂಸ್ಥೆಯವರು ಶುಭ ಹಾರೈಸಿದ್ದಾರೆ. ಶಿಕ್ಷಣ ಮತ್ತು ಮಕ್ಕಳ ಜೀವನದ ಈ ಮಹತ್ವಪೂರ್ಣ ತಿರುವಿನಲ್ಲಿ ಭಯಭೀತಿ ಬಿಟ್ಟು ಕಷ್ಟಪಡದೇ ಇಷ್ಟಪಟ್ಟು ಪರೀಕ್ಷೆ ಎದುರಿಸಿ ಶೇಕಡಾ 85 ಕ್ಕೂ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜದ ಮಕ್ಕಳಿಗೆ ರಾಜ್ಯ ಮಟ್ಟದ “ಶಾರದಾ  ಪುರಸ್ಕಾರ-2024” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9341969084, 8147263552 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷ್ಮಣ್ ರಾವ್ ರೇವಣಕರ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular