ಪಡುಕುಡೂರು : ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 08 ಮತ್ತು 09 ರಂದು ಜರುಗಿದ ಮೈಸೂರು ವಿಭಾಗ ಮಟ್ಟದ 14 ರ ಒಳಗಿನ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ತ್ರತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಉಡುಪಿ ಜಿಲ್ಲೆಯನ್ನು ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅನುಷಾ, ರೋಶ್ನಿ ಥಾಮಸ್ ಸಾಂಬ್ರಣಿಕರ್, ಮುಸ್ಕಾನ್ ಭಾನು, ನಿಶ್ಚಿತ ಎಸ್. ಪೂಜಾರಿ, ಖುಷಿ, ಧೃತಿ ಜಗದೀಶ್ ಪುತ್ರನ್, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೀಕ್ಷಾ, ಸುಚಿತಾ, ಪ್ರಣೀತಾ, ಸಾನ್ವಿಕಾ, ದಿತ್ಯಾ.ಎ.ಶೆಟ್ಟಿ ಪ್ರತಿನಿಧಿಸಿದ್ದಾರೆ.
ಶಾಲಾ ಸಂಚಾಲಕರಾದ ವಂ. ಡಾ. ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಕೋಚ್ ಹೃದಯ ಶೆಟ್ಟಿ, ಪ್ರದೀಪ್, ಜಗದೀಶ್, ಕಾರ್ತಿಕ್ ,ಶಾಲಾ ಮುಖ್ಯಸ್ಥೆ ಐರಿನ್ ಕ್ಲಾರಾ ಡಿಸೋಜ, ಶಿಕ್ಷಕರ ವೃಂದ, ತಂಡದ ವ್ಯವಸ್ಥಾಪಕಿ ಮರಿಯ ಅನಿತ ಮೆಂಡೋನ್ಸ, ರೋಯಲ್ ಫೆರ್ನಾಂಡಿಸ್, ಜೋಯಲ್ ವಾಜ್, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹರೀಶ ಪೂಜಾರಿ.ಎಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಚಿತ್ರ ಪೂಜಾರಿ, ನವೀನ್, ದಿವ್ಯಾ ಶೆಟ್ಟಿ ಕಾರ್ಕಳ ಪಂದ್ಯಾಟದಲ್ಲಿ ಯಶಸ್ಸಿಗೆ ಸಹಕರಿಸಿದ್ದಾರೆ.
ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ : ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ತೃತೀಯ ಸ್ಥಾನ
RELATED ARTICLES