ಮಂಗಳೂರು: ನಗರದ ಬೋಳಾರದಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದದಾರೆ. ಬಂಧಿತ ಆರೋಪಿಯನ್ನು ಆನಂದ ಸಪಲ್ಯ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಎಡ್ವಿನ್ ವಿನಯ ಕುಮಾರ್ ಎಂಬವರಿಗೆ ಅವರ ಸೆಲೂನ್ ನಲ್ಲಿ ಆನಂದ ಸಪಲ್ಯ ಎಂಬಾತ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.