ಕೊಲ್ಲೂರು: ತಮಿಳುನಾಡು ಮುಖ್ಯಮಂತ್ರಿ ಮುತ್ತುವೇಲ್ ಸ್ಟಾಲಿನ್ (ಎಂ.ಕೆ.ಸ್ಟಾಲಿನ್) ಪತ್ನಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ತಾಯಿ ದುರ್ಗಾ ಸ್ಟಾಲಿನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಮಾ. 7ರಂದು ಆಗಮಿಸಿದ ಅವರು ದೇಗುಲದ ವಸತಿಗೃಹದಲ್ಲಿ ತಂಗಿದ್ದರು. ಶನಿವಾರ ಅವರು ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸ್ಟಾಲಿನ್ ಕುಟುಂಬದ ಪರವಾಗಿ ಶ್ರೀದೇವಿಗೆ ಚಿನ್ನದ ಕಿರೀಟವನ್ನು ಕಾಣಿಕೆ ರೂಪದಲ್ಲಿ ನೀಡಿದರು. ದುರ್ಗಾ ಸ್ಟಾಲಿನ್ ಕೆಲವು ಸ್ನೇಹಿತೆಯರೊಂದಿಗೆ ಭೇಟಿ.