ಮಂಗಳೂರು: ಭಾರತದ ಅತಿದೊಡ್ಡ ರಿಟೇಲ್ ಆರೋಗ್ಯ ವಿಮಾ ಕಂಪನಿ ಆಗಿರುವ ಸ್ಟಾರ್ ಹೆಲ್ತ್ ಆಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಸ್ಟಾರ್ ಹೆಲ್ತ್ ಇನ್ಶೂರೆನ್ಸ್) ತನ್ನ ಗೃಹ ಆರೋಗ್ಯ ಸೇವಾ (ಎಚ್‌ಎಚ್‌ಸಿ) ಯೋಜನೆಯನ್ನು ಹೊಸತಾಗಿ ಭಾರತದಾದ್ಯಂತ 100 ಸ್ಥಳಗಳಿಗೆ ವಿಸ್ತರಿಸಿದೆ.
ಈ ಮೂಲಕ ದೇಶದ ಅತಿದೊಡ್ಡ ಗೃಹ ಆರೋಗ್ಯ ಸೇವಾ ಪೂರೈಕೆದಾರರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023ರ ಜುಲೈನಲ್ಲಿ ಪ್ರಾರಂಭವಾದ ಈ ಯೋಜನೆಯು ಈಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನ ಶೇ.85ಕ್ಕಿಂತ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು, ಈ ಯೋಜನೆಯು 3 ಗಂಟೆಗಳ ಒಳಗೆ ಯಾವುದೇ ಖರ್ಚಿಲ್ಲದೆ ಮನೆ ಬಾಗಿಲಿಗೆ ನಗದು ರಹಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತದೆ. ಇದು ಭಾರತದಲ್ಲಿ ವೈದ್ಯಕೀಯ ಸೇವೆಯ ಲಭ್ಯತೆ ಸುಧಾರಿಸುತ್ತದೆ ಮತ್ತು ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತದೆ ಎಂದು ಎಂಡಿ ಮತ್ತು ಸಿಇಓ ಆನಂದ್ ರಾಯ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮುಂಬೈ, ದೆಹಲಿ ಮತ್ತು ಪುಣೆಯಂತಹ ನಗರಗಳು ಈ ಗೃಹ ಆರೋಗ್ಯ ಸೇವೆಗಳನ್ನು ಉತ್ತಮವಾಗಿ ಸ್ವೀಕರಿಸಿದ್ದು, ಇಲ್ಲಿ ವೈರಲ್ ಜ್ವರ, ಡೆಂಗ್ಯೂ, ಎಂಟೆರಿಕ್ ಜ್ವರ, ತೀವ್ರ ಗ್ಯಾಸ್ಟ್ರೋಎಂಟರಿಟಿಸ್ ಮತ್ತು ಉಸಿರಾಟದ ಸೋಂಕುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸೇವೆ ಪಡೆದಿದ್ದಾರೆ. 15,000 ಕ್ಕೂ ಹೆಚ್ಚು ರೋಗಿಗಳು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನ ಗೃಹ ಆರೋಗ್ಯ ಸೇವಾ ಕಾರ್ಯಕ್ರಮದಿಂದ ಗೃಹ ದಾಖಲಾತಿ ಮತ್ತು ಗೃಹ ಆಧಾರಿತ ಸಮಾಲೋಚನೆಗಳ ಪ್ರಯೋಜನ ಪಡೆದಿದ್ದಾರೆ.
ಕೇರ್24, ಪೊರ್ಟಿಯಾ, ಅರ್ಗಲಾ, ಅತುಲ್ಯ ಮತ್ತು ಅಪೋಲೊ ಸೇರಿದಂತೆ ಪ್ರಮುಖ ಆರೋಗ್ಯ ಸೇವಾ ಪೂರೈಕೆದಾರರೊಂದಿಗಿನ ಪಾಲುದಾರಿಕೆಯ ಮೂಲಕ ಸ್ಟಾರ್ ಇನ್ಶೂರೆನ್ಸ್ ಈ ಸೇವೆಯನ್ನು ವಿಸ್ತರಿಸಿದೆ ಎಂದು ಪ್ರಕಟಣೆ ಹೇಳಿದೆ.