ಬೆಂಗಳೂರು: ಭಾರತದಲ್ಲೂ ಈಗ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೆಟ್ರೋಲ್ ಬೆಲೆ ಹೆಚ್ಚುತ್ತಿರುವಾಗ ಜನರು ಎಲೆಕ್ಟ್ರಿಕ್ ವಾಹನ ಖರೀದಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಬಹುತೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ದುಬಾರಿಯಾದುದರಿಂದ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಅಂತಹವರಿಗಾಗಿ ಬೆಂಗಳೂರಿನಲ್ಲೊಂದು ಸ್ಟಾರ್ಟಪ್ ಕಂಪನಿಯೊಂದು ಇದ್ದ ಇಂಧನ ಬಳಕೆಯ ಸ್ಕೂಟರ್‌ಗಳನ್ನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸುವ ಅವಕಾಶವನ್ನು ತೆರೆದಿಟ್ಟಿದೆ. ಆ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲಾಗದವರು ತಮ್ಮಲ್ಲಿರುವ ಇಂಧನ ಬಳಕೆಯ ಸ್ಕೂಟರನ್ನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬದಲಾಯಿಸಿಕೊಳ್ಳಬಹುದು.
ಸ್ಟಾರ್ಯಾ ಎಂಬ ಕಂಪನಿ ಪೆಟ್ರೋಲ್ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುತ್ತಿದೆ. ಈ ಕಂಪನಿ 2018ರಲ್ಲಿ ಓಪನ್ ಆಗಿದ್ದು, ರವಿಕುಮಾರ್ ಜಗನ್ನಾಥ ಎನ್ನುವವರು ಇದನ್ನು ಮುನ್ನಡೆಸುತ್ತಿದ್ದಾರೆ.
ಇದರಲ್ಲಿ 21 ವೋಲ್ಟ್ ಬ್ಯಾಟರಿ ಬಳಸಲಾಗುತ್ತದೆ. ಸಮತಟ್ಟಾದ ರಸ್ತೆಯಲ್ಲಿ ಗಂಟೆಗೆ 85 ಕಿ.ಮೀ. ವೇಗದಲ್ಲಿ ಈ ಸ್ಕೂಟರ್ ಓಡುತ್ತದೆ. ಸ್ಟಾರ್ಯಾ ಸಂಸ್ಥೆ ತಂತ್ರಜ್ಞಾನ ವಿಚಾರದಲ್ಲಿ 4 ಪೇಟೆಂಟ್ ಪಡೆದಿದೆ. ಹಳೆಯ ಬಜಾಜ್ ಚೇತಕ್, ಹೋಂಡಾ ಕೆನೆಟಿಕ್‌ನಂತಹ ವಾಹನಗಳನ್ನು ಬಿಟ್ಟು ಬಹುತೇಕ ಉಳಿದೆಲ್ಲಾ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ.