Monday, December 2, 2024
Homeದಾವಣಗೆರೆವಿಶ್ವಕನ್ನಡಿಗರ ಸಂಸ್ಥೆಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಕರ್ನಾಟಕ ರಾಜ್ಯೋತ್ಸವ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ

ವಿಶ್ವಕನ್ನಡಿಗರ ಸಂಸ್ಥೆಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಕರ್ನಾಟಕ ರಾಜ್ಯೋತ್ಸವ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ

ದಾವಣಗೆರೆ : ಬೀದರ್‌ನ ವಿಶ್ವ ಕನ್ನಡಿಗರ ಸಂಸ್ಥೆಯಿಂದ 69ನೇ ಕನ್ನಡ ರಾಜ್ಯೊತ್ಸವ ಪ್ರಯುಕ್ತ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ”, “ದಾವಣಗೆರೆಯ ಯಕ್ಷಗಾನ ರಾಯಭಾರಿ” ಎಂದು ಖ್ಯಾತರಾದ ನಾಲ್ಕು ದಶಕಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಬರಹ, ಕವಿ, ಗಾಯಕ, ಅಂಕಣಕಾರ, ಹೀಗೆ ಹತ್ತು ಹಲವು ಅಪೂರ್ವ ಸಾಧನೆಗಳನ್ನು ಗುರುತಿಸಿ ವಿಶ್ವ ಕನ್ನಡಿಗರ ಸಂಸ್ಥೆ,ಗಡಿ ಕನ್ನಡಿಗರ ಸಂಘಟಕರು ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಇತ್ತೀಚಿಗೆ ಬೀದರ್‌ನ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರದ ಭವ್ಯ ದಿವ್ಯ ವೇದಿಕೆಯಲ್ಲಿ “ಕರ್ನಾಟಕ ರಾಜ್ಯೋತ್ಸವ ರತ್ನ” ರಾಜ್ಯ
ಪ್ರಶಸ್ತಿ ವಿತರಿಸಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಸುಬ್ಬಣ್ಣ ಕರಕನಹಳ್ಳಿ ತಿಳಿಸಿದ್ದಾರೆ. ಅಮೇರಿಕ ಅಕ್ಕ ಸಮ್ಮೇಲನ ಕರ್ನಾಟಕ ಪ್ರತಿನಿಧಿ ಶಂಭುಲಿಂಗ ವಾಲದೊಡ್ಡಿ, ಬೆಂಗಳೂರಿನ ಗಡಿ ಅಭಿವೃದ್ದಿ ಪ್ರಾಧಿಕಾರ ಕರ್ನಾಟಕ ಪ್ರದೇಶದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ, ಬೀದರಿನ ವೀರ ಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷರಾದ ಅವಿನಾಶರಾಯ, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಕನ್ನಡ ಹೋರಾಟಗಾರ್ತಿ ನಾಗರತ್ನ ಸೋಮಶೇಖರ್ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular