Thursday, December 5, 2024
Homeಮಂಗಳೂರುಭಾರತೀಯ ವೈದ್ಯಕೀಯ ಮಂಗಳೂರು ಶಾಖೆ ಡಾ|| ಅವೀನ್ ಆಳ್ವಾ ರವರಿಗೆ ರಾಜ್ಯ ಮಟ್ಟದ ಶ್ರೆಷ್ಠ ಕಾರ್ಯಾದರ್ಶಿ...

ಭಾರತೀಯ ವೈದ್ಯಕೀಯ ಮಂಗಳೂರು ಶಾಖೆ ಡಾ|| ಅವೀನ್ ಆಳ್ವಾ ರವರಿಗೆ ರಾಜ್ಯ ಮಟ್ಟದ ಶ್ರೆಷ್ಠ ಕಾರ್ಯಾದರ್ಶಿ ಪ್ರಶಸ್ತಿ

ಮಂಗಳೂರು :28 ಭಾರತೀಯ ವೈದ್ಯಕೀಯ ಕರ್ನಾಟಕ ರಾಜ್ಯ ಸಂಸ್ತೆಯ 90 ನೇ ವಾರ್ಷಿಕ ರಾಜ್ಯ ಮಟ್ಟದ ಮೆಡಿಕಾನ್ –2024 ಸಮಾವೇಶವು ಬೆಂಗಳೂರು ನಗರದ ಎಲಹಂಕ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ರೇವಾ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ತಾ|| ಅಕ್ಟೋಬರ್ 26-27 ರಂದು ಭಾರತೀಯ ವೈದ್ಯಕೀಯ ಸಂಘ ಎಲಹಂಕ ಆಶ್ರಯದಲ್ಲಿ ಜರಗಿತು.
ಸುಮಾರು 1200 ವೈದ್ಯಕೀಯ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದರು. ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಡಾ ಎಮ್.ಕೆ. ರಮೇಶ್ ರವರು ಸಮಾವೇಶವನ್ನು ಉದ್ಘಾಟಿಸಿದರು. ಸಂಘದ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಸಂಮಾರAಭದಲ್ಲಿ
ಸಂಘದ ರಾಜ್ಯಾದ್ಯಕ್ಷ ಡಾ|| ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸಿದರು ಈ ಸಂದರ್ಭದಲ್ಲಿ ಭಾರತೀಯ ವೈದ್ಯಕಿಯ ಸಂಘ ಮಂಗಳೂರು ಶಾಖೆಯ ಕಾರ್ಯಾದಶಿಯಾಗಿ ಸೇವೆಸಲ್ಲಿಸುತ್ತಿರುವ ಡಾ| ಅವೀನ್ ಆಳ್ವಾ ರವರಿಗೆ ರಾಜ್ಯಮಟ್ಟದ ಶ್ರೇಷ್ಠ್ಠ ಕಾರ್ಯಾದರ್ಶಿ ಎಂದು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಿ
ಅಭಿನಂದಿಸಲಾಯಿತು. ಈ ಪ್ರತಿಷ್ಠಿತ ಪ್ರಶಸ್ತಿಯು ಫಲಕ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಒಳಗೊಂಡಿದೆ. ವೇದಿಕೆಯಲ್ಲಿ ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ| ಶಂಕರ ನಾರಾಯಣ್ ರಾಜ್ಯ ಕಾರ್ಯದರ್ಶಿ ಡಾ| ವಿ.ಪಿ ಕರುಣಾಕರ್ ಭಾರತೀಯ ವೈದ್ಯಕೀಯ ಸಂಘದ ಚುನಾಯಿತ ರಾಷ್ಟೀಯ ಅಧ್ಯಕ್ಷ ಡಾ| ದಿಲೀಪ್ ಭಾನುಶಾಲಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಶಾಖೆಯ ಕಾರ್ಯದರ್ಶಿ ಡಾ| ಮೋಹನ್ ಕುಮಾರ್
ಮತ್ತು ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷಾರಾದ ಡಾ| ಅಣ್ಣಯ್ಯ ಕುಲಾಲ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular