Thursday, March 20, 2025
Homeಹೆಬ್ರಿರಾಜ್ಯಮಟ್ಟದ " ಸಹಕಾರ " ಚರ್ಚಾ ಸ್ಪರ್ಧೆ : ಮುನಿಯಾಲಿನ ಶ್ವೇತಾ ಆಚಾರ್ಯಗೆ ಪ್ರಥಮ ಪ್ರಶಸ್ತಿ.

ರಾಜ್ಯಮಟ್ಟದ ” ಸಹಕಾರ ” ಚರ್ಚಾ ಸ್ಪರ್ಧೆ : ಮುನಿಯಾಲಿನ ಶ್ವೇತಾ ಆಚಾರ್ಯಗೆ ಪ್ರಥಮ ಪ್ರಶಸ್ತಿ.

ಮುನಿಯಾಲು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ವತಿಯಿಂದ ನಡೆದ ರಾಜ್ಯಮಟ್ಟದ ” ಸಹಕಾರ ” ಕುರಿತ ಪದವಿ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಮುನಿಯಾಲಿನ ಶ್ವೇತಾ ಆಚಾರ್ಯ ಅವರಿಗೆ ಪ್ರಥಮ ಪ್ರಶಸ್ತಿ ಲಭಿಸಿದೆ. ಶ್ವೇತಾ ಆಚಾರ್ಯ ಅವರು ಸಹಕಾರಿ ಸಂಘಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಸ್ವಾಯತ್ತತೆ ನೀಡಿದಾಗ ಮಾತ್ರ ಚಳುವಳಿಯ ಬೆಳವಣಿಗೆ ಸಾಧ್ಯ ಎಂಬ ವಿಶೇಷ ಚರ್ಚಾ ಸ್ಪರ್ಧೆಯಲ್ಲಿ ವಿಚಾರ ಮಂಡಿಸಿದ್ದಾರೆ. ಶ್ವೇತಾ ಅವರು ಮುನಿಯಾಲಿನ ಶಕೀಲಾ ಭಾಸ್ಕರ ಆಚಾರ್ಯ ಅವರ ಪುತ್ರಿ.

RELATED ARTICLES
- Advertisment -
Google search engine

Most Popular