ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ
ರಾಜ್ಯಮಟ್ಟದ “ಕನಸುಗಳು-2024” ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಮಾಹಿತಿ ಕಾರ್ಯಾಗಾರವನ್ನು
ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಸ್.ಬಿ.ಎಸ್ ಸಂಸ್ಥೆ , ಬೆಂಗಳೂರು ಇದರ
ಉಪಾಧ್ಯಕ್ಷರಾದ ವಿನಯ್ ವಿ ಜಾಧವ್ ಆಗಮಿಸಿ ಹದಿಹರೆಯದ ವಿದ್ಯಾರ್ಥಿಗಳ ಮಾನಸಿಕ ತುಮುಲ,
ಅಡೆತಡೆಗಳನ್ನು ಮೀರಿ ವಿದ್ಯಾರ್ಥಿಗಳು ಯಶಸ್ಸಿನೆಡೆಗೆ ತಮ್ಮನ್ನು ತೆರೆದುಕೊಳ್ಳಬೇಕಾದ ಅನಿವಾರ್ಯತೆ,
ಅಕ್ಕರೆ, ಪ್ರೀತಿಯಿಂದ ನಮ್ಮನ್ನು ಬೆಳೆಸಿದ ತಂದೆ-ತಾಯಿಯರ ಋಣ, ಈಗಾಗಲೇ ಸಾಧನೆಗಳನ್ನು
ಸಾಧ್ಯವಾಗಿಸಿಕೊಂಡ ಸಾಧಕರು ಬದುಕಿದ ದಾರಿ, ವ್ಯಕ್ತಿತ್ವ ನಿರ್ಮಾಣದ ಅನಿವಾರ್ಯತೆ ಇವುಗಳ ಕುರಿತಾಗಿ
ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ
ನಿರ್ದೇಶಕರಾದ ಡಾ. ಮುರಳಿಕೃಷ್ಣ ರೈ ವಹಿಸಿಕೊಂಡು, ಇಂದಿನ ಕಾಲಘಟ್ಟದಲ್ಲಿ ಓದಿನ ಜೊತೆಗೆ
ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸುವಲ್ಲಿ ವಿದ್ಯಾರ್ಥಿಗಳು
ಗಮನಕೊಟ್ಟಲ್ಲಿ ಅದು ಅವರ ಮನಸ್ಸನ್ನು ತೀಕ್ಷ್ಣಗೊಳಿಸುವಲ್ಲಿ ಪರಿಣಾಮಕಾರಿಯಾಗಬಲ್ಲದು. ಈ
ಉದ್ದೇಶದಿಂದ ಹಮ್ಮಿಕೊಳ್ಳಲಾದ ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಸಂಪೂರ್ಣ
ಪ್ರಯೋಜನವನ್ನು ಪಡೆದು ಜೀವನದಲ್ಲಿ ಸಫಲರಾಗುವಂತೆ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.