Thursday, September 12, 2024
Homeಕಾರ್ಕಳರಾಜ್ಯ ಮಟ್ಟದ ಕುಣಿತ ಭಜನಾ ಸ್ವರ್ಧೆ “ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ” ಕಾರ್ಯಕ್ರಮ

ರಾಜ್ಯ ಮಟ್ಟದ ಕುಣಿತ ಭಜನಾ ಸ್ವರ್ಧೆ “ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ” ಕಾರ್ಯಕ್ರಮ

ಭಜನೆಯು ದೇವರನ್ನು ಆರಾಧಿಸುವ ಮಹಾಮಂತ್ರ ಸಿ.ಎ. ಕೆ ಕಮಲಾಕ್ಷ ಕಾಮತ್ ಕಾರ್ಕಳ
ಕಾರ್ಕಳ: ಶ್ರೀ ಆಂಜನೇಯ ಭಜನಾ ಮಂಡಳಿ(ರಿ.) ಸಾಣೂರು ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ವರ್ಧೆ “ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ” ಕಾರ್ಯಕ್ರಮವು ಮುರತ್ತಂಗಡಿಯ ರಿಜೆನ್ಸಿ ಸಭಾಭವನದಲ್ಲಿ ಆಗಸ್ಟ್ 18ರಂದು ನಡೆಯಿತು. ಸಮಾರಂಭದ ಉಧ್ಘಾಟನೆಯನ್ನು ಸಿ.ಎ. ಕೆ. ಕಮಲಾಕ್ಷ ಕಾಮತ್ ಕಾರ್ಕಳ ಇವರು ನೆರವೆಸುತ್ತಾ ಭಜನೆಯು ದೇವರನ್ನು ಆರಾಧಿಸುವ ಮಹಾಮಂತ್ರ ವಾಗಿದೆ, ಭಕ್ತಿಯಲ್ಲಿ ಮಹಾಶಕ್ತಿ ಆಡಗಿದೆ ಈ ನಿಟ್ಟಿನಲ್ಲಿ ಸಾಣೂರು ಶ್ರೀ ಆಂಜನೇಯ ಭಜನಾ ಮಂಡಳಿ (ರಿ.) ಇವರ ಕಾರ್ಯಕ್ರಮ ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿಯವರು ನಮ್ಮ ಹಿರಿಯರ ಕಾಲದಲ್ಲಿ ಭಜನೆ ಮಾಡದೇ ಮನೆಯಲ್ಲಿ ಊಟ ಹಾಕುತ್ತಿರಲಿಲ್ಲ, ಆದರೆ ಕಾಲ ಬದಲಾದಂತೆ ಮತ್ತೆ ಮಕ್ಕಳಿಗೆ ಯುವಕ ಯುವತಿಯರಿಗೆ ಭಜನೆಯ ಆಸಕ್ತಿ ಬೆಳೆಯುವುದು ತುಂಬಾ ಸಂತಸದ ವಿಚಾರವೆಂದರು.

ವೇದಿಕೆಯಲ್ಲಿ ಉದ್ಯಮಿ ವಿಜಯ ಶೆಟ್ಟಿ, ವಿ. ಹಿ. ಪ. ಧರ್ಮ ಪ್ರಸಾರ ಪ್ರಮುಖ್ ಸುನೀಲ್ ಕೆ. ಆರ್, ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್, ಸಾಣೂರು ಯುವಕ ಮಂಡಲ ಆಧ್ಯಕ್ಷ ಪ್ರಸಾದ್ ಶೆಟ್ಟಿ, ಉದ್ಯಮಿ ಜ್ಯೋತಿ ಪೈ, ಕಾರ್ಕಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿ ಹೇಮಲತಾ, ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ, ಶುಭ ಹಾರೈಸಿದರು. ಸಮಾರಂಭದ ಆಧ್ಯಕ್ಷರಾದ ವೇದಮೂರ್ತಿ ಶ್ರೀರಾಮ್ ಭಟ್, ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವ ದೇವಸ್ಥಾನ, ಸಾಣೂರು, ಇವರು ಭಗವಂತನನ್ನು ನೆನಪು ಮಾಡುವುದೇ ಭಜನೆ ಭಜನೆಯಿಂದ ಪರಮ್ಮಾನ ಸತ್ಕಾರವಾಗಲು ಸಾಧ್ಯ ಎಂಬುದು ತಿಳಿಸಿದರು. ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ ಕಾರ್ಯದರ್ಶಿ ಸುಕೇಶ್ ಅವರ ಸ್ವಾಗತಿಸಿದರು, ಶ್ರೀ ಆಂಜನೇಯ ಭಜನಾ ಮಂಡಳಿ(ರಿ.) ಸಾಣೂರು ಸದ್ಯಸರಾದ ಚಿರಾಗ್‌ರವರು ಧನ್ಯವಾದ ಅರ್ಪಿಸಿದರು, ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು

RELATED ARTICLES
- Advertisment -
Google search engine

Most Popular