ಉಡುಪಿ: ರಾಜ್ಯ ಮಟ್ಟದ ಸಂಗೀತ ಸ್ಪಧೆ೯ಯನ್ನು ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರಿನಲ್ಲಿ 96 ಸಂಗೀತ ಸ್ಪಧೆ೯ಯಲ್ಲಿ ಭಾಗವಹಿಸಿದ್ದು, ಮೂರು ಹಂತದಲ್ಲಿ ಆಡಿಷನ್ ಪ್ರಕ್ರೀಯೆ ನಡೆಸಲಾಗಿತ್ತು. ಆಯ್ಕೆಯಾದ ಹನ್ನೆರಡು ಸ್ಪಧೆ೯ಗಳಿಗೆ ಸಂಗೀತ 2024 ಬಿ ಅಪ್ಪಣ್ಣ ಹೆಗ್ಡೆಯವರ ತೊಂಬತ್ತರ ಸಂಭ್ರಮದ ವೇದಿಕೆ ಯಲ್ಲಿ ಜರುಗಿತು.
ಕಾಯ೯ಕ್ರಮ ಅಧ್ಯಕ್ಷತೆಯನ್ನು ಶ್ರೀ ಬಿ ಅಪ್ಪಣ್ಣ ಹೆಗ್ಡೆಯವರ ಮಾಗ೯ದಶ೯ನದಲ್ಲಿ ಶ್ರೀ ಮಂಜುನಾಥ್ ಶೆಟ್ಟಿ ಶ್ಯಾನ್ಕಟ್ಟು ಉದ್ಘಾಟಿಸಿದರು.
ಅತಿಥಿಗಳಾಗಿ ಶ್ರೀ ರವಿಕಿರಣ್ ಮುರುಡೇಶ್ವರ, ಕೆ.ಆರ್ ನಾಯ್ಕ ಕುಂದಾಪುರ, ದಿನಕರ್ ಶೆಟ್ಟಿ ಬೇಳೂರು, ಪ್ರವೀಣ್ ಕುಮಾರ್ ಸೇರೆಗಾರ್ ಚಿಲ್ಮಿ ಮಠ, ನಾಗರಾಜ್ ಮಡಿವಾಳ ಬಳ್ಕೂರು, ಸುವಣ೯ಲತಾ ಎಸ್.ಕೋನಾ೯ಯ, ಮುಂಬಾರು ದಿನಕರ್ ಶೆಟ್ಟಿ, ರಾಹುಲ್ ಹೆಗ್ಡೆ, ಸದಾಶಿವ ಪೂಜಾರಿ ಮಾಗೊ೯ಳಿ, ಬಲರಜವಾಡಿ ಮೈಸೂರು, ದೇವಾನಂದ ಶೆಟ್ಟಿ ಹಳ್ನಾಡು, ಕಲಾತರಂಗ (ರಿ) ಬಸ್ರೂರು ಗೌರವ ಅಧ್ಯಕ್ಷರು ನಾಗರಾಜ ಗೋಳಿಯವರು ವೇದಿಕೆ ಹಂಚಿಕೊಂಡರು.
ವಿಶೇಷ ಸಾಧಕರಿಗೆ ಸನ್ಮಾನ
ಡಾ.ಶ್ರಾವ್ಯಾ ಎಸ್.ರಾವ್, ವಿದೂಷಿ ಯುಕ್ತಿ ಉಡುಪ ಬಳ್ಕೂರು, ಶ್ರೇಷ್ಠ ಆರ್ ದೇವಾಡಿಗ, ನಿರೀಕ್ಷಾ ದಿನಕರ್ ಶೆಟ್ಟಿ, ಮುಂಬಾರು ದಿನಕರ್ ಶೆಟ್ಟಿ, ಪ್ರದೀಪ ಕುಮಾರ್ ಬಸ್ರೂರು ಇವರನ್ನು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಸಭಾ ಕಾಯ೯ಕ್ರಮ ನಂತರ ಸಂಗೀತ ಸಮರ 2024ರ ಸಂಗೀತ ಸ್ಪಧೆ೯ ನಡೆಸಲಾಯಿತು. ಮೊದಲ ಹಂತದಲ್ಲಿ ಹನ್ನೆರಡು ಜನರಲ್ಲಿ ಆರು ಜನರನ್ನು ಮತ್ತೆ ಆಯ್ಕೆ ಮಾಡಿ ಅಂತಿಮ ಸುತ್ತಿನ ಪ್ರಥಮ ಸ್ಥಾನವನ್ನು ಸುರೇಶ್ ಹೆಮ್ಮಾಡಿ, ದ್ವಿತೀಯ ಸ್ಥಾನವನ್ನು ಶ್ರೀರಕ್ಷಾ ಭಟ್ ಬಂಟ್ವಾಳ,ತೃತೀಯ ಸ್ಥಾನವನ್ನು ಚೈತನ್ಯ ಎನ್. ಶಿವಪುರ ಹಂಚಿಕೊಂಡರು.
ಕಾಯ೯ಕ್ರಮದಲ್ಲಿ ಕಲಾತರಂಗ (ರಿ) ಬಸ್ರೂರು ಅಧ್ಯಕ್ಷರಾದ ಶ್ರೀ ಓಂಗುರು ಬಸ್ರೂರು ಪ್ರಾಸ್ತಾವಿಕ ಸ್ವಾಗತ ನುಡಿಯನ್ನಾಡಿದರು, ಪ್ರಾಥ೯ನೆಯನ್ನು ಶ್ರೀ ರವಿ ಬನ್ನಾಡಿ, ನಿರೂಪಣೆಯನ್ನು ಸೌಮ್ಯಶ್ರೀ, ಓಂಗುರು ಧನ್ಯವಾದವನನ್ನು ಸಂಸ್ಥೆಯ ಕಾಯ೯ದಶಿ೯ ಶ್ರೀ ಚಂದ್ರಶೇಖರ ಬಸ್ರೂರು ನಡೆಸಿದರು. ಸ್ಫದಾ೯ ಕಾಯ೯ಕ್ರಮದ ನಿರೂಪಣೆಯನ್ನು ಶ್ರೀ ಸಂದೇಶ್ ಶೆಟ್ಟಿ ಸಲ್ವಾಡಿ ನಿವ೯ಹಿಸಿದರು.