ಬಜಪೆ :ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ಉಪ ನಿರ್ದೇಶಕರ ಕಛೇರಿ ದ.ಕ ಜಿಲ್ಲೆ ಹಾಗೂ ನ್ಯೂ ಹಾರ್ಡ್ ವೀಕ್ ಇಂಡಿಯನ್ ಶಾಲೆಯ ಸಹಯೋಗದೊಂದಿಗೆ 2024 -25 ನೇ ಸಾಲಿನ 14ರಿಂದ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡಾಕೂಟವು ಮಾಗಡಿಯ ಕೊಡಿಗೆ ಹಳ್ಳಿಯ ಶಾಲಾ ಆವರಣದಲ್ಲಿ ನಡೆಯಿತು.ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೌಲ್ಯ ಆರ್ ಶೆಟ್ಟಿ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.