ಬ್ರಹ್ಮಾವರದಲ್ಲಿ ಡಿ.20ರಂದು ರಾಜ್ಯಮಟ್ಟದ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶ

0
48

ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.), ಕುಂದಾಪುರ ಇವರ ಆಶ್ರಯದಲ್ಲಿ ರಾಮಕ್ಷತ್ರಿಯ ಸಮಾಜದ ರಾಜ್ಯಮಟ್ಟದ ವೃತ್ತಿಪರರ ಸಮಾವೇಶವನ್ನು ಡಿಸೆಂಬರ್ 20, 2026ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ದೇವಕಿ ಕೃಷ್ಣ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ರಾಜ್ಯಮಟ್ಟದ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ವಿವಿಧ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಸೆಪ್ಟೆಂಬರ್ 6, 2026ರಂದು ಸಂಜೆ 5 ಗಂಟೆಗೆ ಹೊನ್ನಾವರದ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಸಭೆಯಲ್ಲಿ ರಾಜ್ಯಮಟ್ಟದ ಸಮಾವೇಶದ ರೂಪುರೇಷೆ, ಕಾರ್ಯಕ್ರಮದ ಸಿದ್ಧತೆ, ಉತ್ತರ ಕನ್ನಡ ಜಿಲ್ಲೆಯ ವೃತ್ತಿಪರರ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಜಿಲ್ಲೆಯ ಎಲ್ಲ ವೃತ್ತಿಪರರು ಹಾಗೂ ಸಮಾಜದ ಪ್ರಮುಖರು ಸಕಾಲದಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪೂರ್ವಭಾವಿ ಸಭೆಗೆ ರಾಜು ಎಂ. ನಾಯ್ಕ್ ಮಂಕಿ, ಅಣ್ಣಪ್ಪ ನಾಯ್ಕ್ ಮಂಕಿ, ಸೀತಾರಾಮ್ ಜಿ. ನಾಯ್ಕ್ ಹಳದಿಪುರ ಹಾಗೂ ವಿಶ್ವ ರಾಮಕ್ಷತ್ರಿಯ ಸಂಘ, ಉತ್ತರ ಕನ್ನಡದ ಸದಸ್ಯರು ನೇತೃತ್ವ ವಹಿಸಲಿದ್ದಾರೆ. ರಾಮಕ್ಷತ್ರಿಯ ಸಮಾಜದ ಸಂಘಟಕ ಆನಂದ ವಾಯ್. ನಾಯ್ಕ್ ಚಂದಾವರ ಅವರು ಸಭೆಯ ಸಂಘಟನಾ ಜವಾಬ್ದಾರಿ ವಹಿಸಿದ್ದಾರೆ.