ಪುತ್ತೂರು: ಸತ್ಯಶಾಂತ ಪ್ರತಿಷ್ಠಾನ (ರಿ )ಮುರ ಬನಾರಿ, ಪುತ್ತೂರು ದ. ಕ ಇಲ್ಲಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾಗಿರುವ ಶಕುಂತಲಾ ಶಾಂತಾ ಕುಂಟಿನಿಯವರು ಡಿ. 25ರಂದು ರಾಜ್ಯಮಟ್ಟದ ಕಿರುಕಥಾ ಸ್ಪರ್ಧಾ ಬಹುಮಾನ ವಿತರಣೆ, ಸಾಹಿತ್ಯ, ಸಾಂಸ್ಕೃತಿಕ, ಗಾನಲಹರಿ, ಕವಿಗೋಷ್ಠಿ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾದರು.
ಗಣೇಶ ಪ್ರಸಾದ ಪಾಂಡೇಲು, ಪತ್ರಕರ್ತರು ಇವರ ಅಧ್ಯಕ್ಷತೆಯಲ್ಲಿ 37 ಕವಿಗಳು ಕವನ ವಾಚನ ಮಾಡಿದರು. 14ಮಂದಿ ಕಿರಿಯ ಯುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು, ಪತ್ರಕರ್ತರಾದ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಉದ್ಘಾಟಿಸಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಎಂಟು ಮಂದಿ ಸಾಧಕರಾದ ಅನಿಲ್ ಹಾಂದಿ, ಗಾಯಕರು, (ಕಲಾ ಸಾಧಕ,) ಬಿ. ರಾಜೀವ ಗೌಡ, ಸಮಾಜ ಸೇವೆ, (ಕ್ರಿಯಾಶೀಲ ಸಾಧಕ,) ಕೃಷ್ಣವೇಣಿ, ಭಜನಾ ಮಂಡಳಿ, (ಕಲಾ ಪ್ರೇರಣಾ) ಕು. ಶ್ರೇಯಾ ಕಡಬ, (ಕಲಾಸಾಧಕಿ ) ರವಿ ಪಾಂಬಾರು, ಗಾಯಕರು, ಸಂಘಟಕರು, (ಕ್ರಿಯಾಶೀಲ ಸಾಧಕರು ) ನಾಗೇಶ್ ಜಾನಪದ ಪರಿಷತ್ ಬೆಂಗಳೂರು, (ಸಾಮಾಜಿಕ ಸೇವಾರತ್ನ)ಲಕ್ಷ್ಮೀ ಮೂರ್ತಿ, (ಸಾಮಾಜಿಕ ಸೇವಾರತ್ನ ) ದಿನೇಶ್ ಮಂಗಳೂರು, ಗಾಯಕರು, (ಗಾನ ಮಾಂತ್ರಿಕ)ಇವರ ವಿವಿಧ ಸಾಧನೆಗಳ ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ, ಹಿರಿಯ ವಿಶ್ರಾಂತ ಪ್ರೊ. ವಿ. ಬಿ. ಅರ್ತಿಕಜೆ, ಹಿರಿಯ ಪತ್ರಕರ್ತರು, ಅಂಕಣಕಾರರು ಪ್ರಶಸ್ತಿ ಫಲಕ, ಸ್ಮರಣಿಕೆ ನೀಡಿ ಪುರಸ್ಕರಿಸಿ ಅಭಿನಂದಿಸಿದರು.
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷರು, ಬಿ. ಐತ್ತಪ್ಪ ನಾಯ್ಕ್ ರಾಜ್ಯ ಮಟ್ಟದ ಕಿರುಕಥಾ ಸ್ಪರ್ಧಾ ಬಹುಮಾನ ವಿತರಿಸಿದರು. ಶಾಂತ ಪರಿಸರದ ಸುಂದರ ಮಡಿಲಿನ ಸತ್ಯಶಾಂತ ಶ್ರೀ ನಿವಾಸ ಸಭಾಂಗಣದಲ್ಲಿ ಜರುಗಿದ ಸುಂದರ ಕಾರ್ಯಕ್ರಮದಲ್ಲಿ ಹಿರಿಯರಾದ ವಿ. ಬಿ. ಅರ್ತಿಕಜೆ, ಶಕುಂತಲಾ ಶಾಂತಾ ಕುಂಟಿನಿ, ರವಿ ಕುಂಟಿನಿಯವರ ಸಾಹಿತ್ಯ -ಸಹಕಾರವನ್ನು ಕೊಂಡಾಡಿದರು. ಸಭಾಧ್ಯಕ್ಷರು ಪುತ್ತೂರು ಉಮೇಶ್ ನಾಯಕ್ ಶಾಂತಾ ಕುಂಟಿನಿಯವರ ಸಾಹಿತ್ಯ ಸಂಘಟನೆ ಸಾಹಿತ್ಯ ಪ್ರೇಮವನ್ನು ಅಭಿನಂದಿಸಿ ಮಾತನಾಡಿದರು.
ಸತ್ಯಕಾಮ ಭಟ್ ಕುಂಟಿನಿ ಪ್ರಾರ್ಥಿಸಿದರು. ಶಾಂತಾಕುಂಟಿನಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸತ್ಯಾತ್ಮ ಭಟ್ ಕುಂಟಿನಿ, ಉದಯ ಶಂಕರ್, ಜಯರಾಮ ಭಟ್ ಯು., ಸೌರಭಾ ಜಯರಾಮ್ ಸಹಕರಿಸಿದರು. ಅಬ್ದುಲ್ ಹಮೀದ್, ಗೋಳ್ತಮಜಲು ಸುಂದರವಾಗಿ ನಿರೂಪಿಸಿದರು.