ಕಾರ್ಕಳ: ರಾಜ್ಯದ ಮೊದಲ ಓ ಡಿ ಫ್. ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಕಾರ್ಕಳ ಪ್ರಥಮ ಸ್ಥಾನವನ್ನು ಹೆಬ್ರಿಗೆ ದ್ವಿತೀಯ ಸ್ಥಾನ ಅರ್ಹವಾಗಿ ಲಭಿಸಿದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಾಲಿನಿ ಶೆಟ್ಟಿ ಹೇಳಿದರು.
ಕಾರ್ಕಳದಲ್ಲಿ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾ ಜ್ಯ ನಿರ್ವಹಣೆಗೆ ನಿಟ್ಟೆಯಲ್ಲಿ ಎಂ ಆರ್ ಎಫ್ ಘಟಕ ಪ್ರತಿ ಪಂಚಾಯತಿಗಳಲ್ಲಿಎರ್ಸಎಲ್‌ಆರ್‌ಎಂ. ಘಟಕ ಕರಿಯ ಕಲ್ಲಿನಲ್ಲಿ ತಾಜ್ಯ ನಿರ್ವಹಣ ಘಟಕ ಪ್ರತಿ ಮನೆಯಲ್ಲಿ ಬಚ್ಚಲ ಗುಂಡಿ ನಿರ್ಮಾಣಕ್ಕೆ ಆದ್ಯತೆ ಗಾಂಧೀಜಿಗೆ 150 ಸ್ವಚ್ಛತೆಗೆ ಸ್ವಲ್ಪ ಹೊತ್ತು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಶಾಸಕರು ನಿರಂತರವಾಗಿ ಹಮ್ಮಿಕೊಂಡ ಪರಿಣಾಮ ಈಗ ಸ್ವಚ್ಛ ತಾಲೂಕಾಗಿ ಆಯ್ಕೆಗೊಂಡಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಹೆಬ್ರಿತಾಲೂಕ್ ಪಂಚಾಯತ್ ಅಧ್ಯಕ್ಷ ರಮೇಶ ಪೂಜಾರಿ, ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಗೋಪಾಲ ಮೂಲ್ಯ, ಪುರಸಭಾ ಸದಸ್ಯ ನಿರಂಜನ್ ಜೈನ್, ಹರೀಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಮೊದಲ ಓ ಡಿ ಫ್. ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಕಾರ್ಕಳ ಪ್ರಥಮ
RELATED ARTICLES