ನಿಮ್ಮ ದೀಪಾವಳಿ ಖರೀದಿ ದೇಶದ್ರೋಹಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದೆಯೇ ?
ಪ್ರಸ್ತಾವನೆ : ಭಾರತ ಸಂವಿಧಾನವು ಎಲ್ಲಾ ನಾಗರಿಕರಿಗೆ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದೆ. ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಅಧಿಕೃತ ಸಂಸ್ಥೆಗಳಾದ FSSAI ಮತ್ತು FDA ಮಾತ್ರ ಆಹಾರ ಉತ್ಪನ್ನಗಳಿಗೆ ಪ್ರಮಾಣೀಕರಣದ ಹಕ್ಕು ಹೊಂದಿವೆ. ಆದರೆ ಕೆಲವು ಖಾಸಗಿ ಇಸ್ಲಾಮಿಕ್ ಸಂಸ್ಥೆಗಳು ಅಕ್ರಮವಾಗಿ ‘ಹಲಾಲ್ ಪ್ರಮಾಣಪತ್ರ’ ನೀಡಲು ಒತ್ತಡ ಹೇರುತ್ತಿವೆ. ಈ ಮೂಲಕ ಹಲಾಲ್ ಆರ್ಥಿಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸ್ವತಂತ್ರ ಭಾರತವು ತನ್ನದೇ ಆದ ಆರ್ಥಿಕತೆಯನ್ನು ಹೊಂದಿರುವಾಗ ಈ ರೀತಿಯ ಪ್ರತ್ಯೇಕ ಖಾಸಗಿ ಸಮಾನಾಂತರ ಆರ್ಥಿಕತೆಯನ್ನು ನಿರ್ಮಾಣ ಮಾಡುವುದು ಅನುಚಿತವಾಗಿದೆ. ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೂಲಕ ಈ ಆರ್ಥಿಕತೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಹಲಾಲ್ ಪ್ರಮಾಣಿಕರಣಕ್ಕಾಗಿ ಮೌಲಾನಾರನ್ನು ‘ಹಲಾಲ್ ಇನ್ಸ್ಪೆಕ್ಟರ್’ ಗಳನ್ನಾಗಿ ನೇಮಿಸಲಾಗುತ್ತಿದೆ ಮತ್ತು ಅವರಿಗೆ ವೇತನವನ್ನು ನೀಡಲಾಗುತ್ತಿದೆ. ಇದರಿಂದಾಗಿ ಈ ವ್ಯವಹಾರವು ಆರ್ಥಿಕವಾಗಿ ಮಾತ್ರವಲ್ಲದೆ ಧಾರ್ಮಿಕ ಪಕ್ಷಪಾತವನ್ನೂ ಹೊಂದಿದೆ. ಇದು ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಇತರ ಮುಸ್ಲಿಮೇತರ ಸಮಾಜಗಳಿಗೆ ಅನ್ಯಾಯವಾಗಿದೆ. ಇಂಗ್ಲೆಂಡ್ ಮತ್ತು ನೆದರ್‌ಲ್ಯಾಂಡ್‌ನಂತಹ ಯುರೋಪ್ ನ 7 ದೇಶಗಳಲ್ಲಿ ಹಲಾಲ್ ಮಾಂಸವನ್ನು ನಿರ್ಬಂಧಿಸಲಾಗಿದೆ, ಮತ್ತು ಉತ್ತರ ಪ್ರದೇಶ ಸರ್ಕಾರ ಹಲಾಲ್ ಪ್ರಮಾಣಪತ್ರ ಮತ್ತು ಅದರ ವ್ಯವಹಾರಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿದೆ. ಈ ಪ್ರಕಾರ ದೇಶದಾದ್ಯಂತ ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸಲು, ಹಾಗೆಯೇ ಪ್ರತಿಯೊಬ್ಬ ಜಾಗೃತ ಭಾರತೀಯನೂ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.
ನಮ್ಮೆಲ್ಲರ ಉದ್ದೇಶ ‘ಹಲಾಲ್ ಮುಕ್ತ ಭಾರತ’ ಮಾಡುವುದಾಗಿದೆ !
ಮೊದಲು ಮಾಂಸಹಾರಕ್ಕೆ ಸೀಮಿತವಾಗಿದ್ದ ಹಲಾಲ್ ಈಗ ಸಸ್ಯಾಹಾರ, ಸೌಂದರ್ಯವರ್ಧಕ, ಔಷಧಿಗಳು, ಆಸ್ಪತ್ರೆಗಳು, ಮತ್ತು ಗೃಹೋಪಯೋಗಿ ವಸ್ತುಗಳವರೆಗೆ ವಿಸ್ತರಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳು ಕಾನೂನುಬಾಹಿರವಾಗಿ ಹಲಾಲ್ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸಿದೆ. ಹಿಂದೂ ಜನಜಾಗೃತಿ ಸಮಿತಿಯು 2019 ರಿಂದ ‘ಹಲಾಲ್ ಹೇರಿಕೆ’ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ್ದು ವ್ಯಾಪಾರಿಗಳಿಗೆ ಈ ಕುರಿತು ವ್ಯಾಖ್ಯಾನವನ್ನು ಆಯೋಜಿಸುತ್ತಿದೆ. ಇದರಿಂದ ಜಾಗೃತರಾಗಿ ಹಲವು ವ್ಯಾಪಾರಿಗಳು ಆರ್ಥಿಕ ಜಿಹಾದ್ ವಿರುದ್ಧದ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಸರ್ಕಾರವು ತಕ್ಷಣ ಹಲಾಲ್ ಪ್ರಮಾಣಪತ್ರದ ಮೇಲೆ ನಿರ್ಬಂಧ ಹೇರುವಂತೆ ಸಮಿತಿ ಒತ್ತಾಯಿಸುತ್ತಿದೆ. ಈ ಬೇಡಿಕೆ ಈಗ ಪ್ರತಿಯೊಬ್ಬ ಹಿಂದೂವಿನ ಮನದಲ್ಲಿ ಮೂಡಬೇಕು. ದೀಪಾವಳಿಯಂತಹ ಹಬ್ಬಗಳಲ್ಲಿ ಆನ್‌ಲೈನ್ ವ್ಯಾಪಾರದ ಮೂಲಕ ಹಿಂದೂ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಹಲಾಲ್-ಮುಕ್ತ ದೀಪಾವಳಿ ಅಭಿಯಾನಕ್ಕೆ ಸಂಪೂರ್ಣ ಹಿಂದೂ ಸಮಾಜವು ಕೈಜೋಡಿಸಬೇಕು ಎಂದು ಸಮಿತಿ ವಿನಂತಿಸುತ್ತಿದೆ. ನಮ್ಮ ಗುರಿ ಕೇವಲ ‘ಹಲಾಲ್-ಮುಕ್ತ ದೀಪಾವಳಿ’ ಆಗದೆ, ‘ಹಲಾಲ್-ಮುಕ್ತ ಭಾರತ’ ಆಗಬೇಕಾಗಿದೆ.
ಭಯೋತ್ಪಾದಕರಿಗೆ ಕಾನೂನು ಸಹಾಯ :
ಪ್ರಪಂಚದಾದ್ಯಂತ ‘ಹಲಾಲ್ ಆರ್ಥಿಕತೆ’ ಖಾಸಗಿ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಈ ವ್ಯವಸ್ಥೆಯ ಮೇಲೆ ಯಾವುದೇ ದೇಶದ ಸರ್ಕಾರದ ನಿಯಂತ್ರಣವಿಲ್ಲ. ಈ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬ ಅನುಮಾನವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಹಲಾಲ್ ಆರ್ಥಿಕತೆ ಮತ್ತು ಜಿಹಾದಿ ಭಯೋತ್ಪಾದನಾ ಚಟುವಟಿಕೆಗಳ ನಡುವೆ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಹಲಾಲ್ ಪ್ರಮಾಣಪತ್ರದ ಮೂಲಕ ಕೋಟ್ಯಾಂತರ ರೂಪಾಯಿ ಸಂಗ್ರಹಿಸುತ್ತಿರುವ ಖಾಸಗಿ ಸಂಸ್ಥೆಗಳು ಮುಂಬೈ ರೈಲು ಬಾಂಬ್ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, 26/11 ಮುಂಬೈ ದಾಳಿಯಂತಹ ಭಯೋತ್ಪಾದಕ ಘಟನೆಗಳಲ್ಲಿ ಆರೋಪಿಯಾಗಿರುವ ಭಯೋತ್ಪಾದಕರಿಗೆ ಕಾನೂನು ನೆರವು ನೀಡಲಾಗುತ್ತಿದೆ. ಭಾರತದಲ್ಲಿ ಬಂಧಿತವಾಗಿರುವ ಸುಮಾರು 700 ಭಯೋತ್ಪಾದಕರಿಗೆ ಕಾನೂನು ನೆರವು ನೀಡುತ್ತಿದೆ. ಈ ಆರ್ಥಿಕ ವ್ಯವಸ್ಥೆಯಿಂದ ಸಂಗ್ರಹಿತ ಹಣವನ್ನು ಜಿಹಾದಿ ಭಯೋತ್ಪಾದಕರಿಗೆ ಕಾನೂನು ಸಹಾಯ ಒದಗಿಸಲು ಬಳಸಲಾಗುತ್ತಿದ್ದು, ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಸಮಸ್ಯೆಯಾಗುತ್ತಿದೆ.
ಅಲ್ಪಸಂಖ್ಯಾತ ಸರ್ವಾಧಿಕಾರ :
ಅತ್ಯಂತ ಆಘಾತಕಾರಿ ವಿಷಯವೆಂದರೆ, ಶುದ್ಧ ಸಸ್ಯಾಹಾರಿ ಸ್ನಾಕ್ಸ್, ಡ್ರೈ ಫ್ರೂಟ್ಸ್, ಸಿಹಿ ತಿಂಡಿಗಳು, ಚಾಕ್ಲೆಟ್, ಧಾನ್ಯಗಳು, ಎಣ್ಣೆ, ಸಾಬೂನು, ಶಾಂಪೂ, ಟೂತ್‌ಪೇಸ್ಟ್, ಕಾಜಲ್, ಲಿಪ್‌ಸ್ಟಿಕ್, ಮತ್ತು ಇತರ ಸೌಂದರ್ಯವರ್ಧಕಗಳು ಹಲಾಲ್ ಸರ್ಟಿಫಿಕೇಟ್’ ಪಡೆಯಲಾರಂಭಿಸಿವೆ. ಇಂಗ್ಲೆಂಡ್ ವಿದ್ವಾಂಸ ನಿಕೋಲಸ್ ತಾಲೇಬ್ ಇದನ್ನು ‘ಅಲ್ಪಸಂಖ್ಯಾತ ಸರ್ವಾಧಿಕಾರ’ ಎಂದು ಕರೆದಿದ್ದಾರೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಅಪಾಯಕಾರಿಯಾಗಬಹುದು. ಇದರಿಂದ ಭಾರತದ ನಡಿಗೆ ಇಸ್ಲಾಮೀಕರಣದೆಡೆಗೆ ಎಂದರೆ ತಪ್ಪಾಗಲಾರದು. ಹಲಾಲ್ ನಿಂದ ಪಡೆದ ಹಣ ಇಸ್ಲಾಮಿಕ್ ಬ್ಯಾಂಕ್ ಗಳಿಗೆ ಹೋಗುತ್ತದೆ. ‘ಹಲಾಲ್ ವ್ಯವಸ್ಥೆ’ ಸರ್ವಾಧಿಕಾರಿಯಂತಿದೆ.
ಪ್ರತ್ಯೇಕ ‘ಹಲಾಲ್ ಪ್ರಮಾಣೀಕರಣ’ ದ ಅಗತ್ಯವೇನು ?
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹಲಾಲ್ ಉತ್ಪನ್ನಗಳ ಬೇಡಿಕೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗುತ್ತಿದೆ, ಮತ್ತು ಹಿಂದೂ ವ್ಯಾಪಾರಿಗಳು ವ್ಯಾಪಾರ ಮಾಡಲು ಹಲಾಲ್ ಪ್ರಮಾಣಪತ್ರ ಪಡೆಯಬೇಕಾಗಿದೆ. ಮೊದಲು ಮಾಂಸಕ್ಕೆ ಮಾತ್ರ ಸೀಮಿತವಾಗಿದ್ದ ಹಲಾಲ್, ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಅಳವಡಿಸಲಾಗುತ್ತಿದೆ. 2024 ವೇಳೆಗೆ ಹಲಾಲ್ ಉತ್ಪನ್ನಗಳ ಮಾರುಕಟ್ಟೆಯು 2.5 ಟ್ರಿಲಿಯನ್ ಡಾಲರ್‌ವರೆಗೆ ತಲುಪುವ ಸಾಧ್ಯತೆ ಇದೆ. ಮೂಲತಃ, ಭಾರತ ಸರ್ಕಾರದ FSSAI ಮತ್ತು FDA ಸಂಸ್ಥೆಗಳು ಉತ್ಪನ್ನಗಳ ಪ್ರಮಾಣೀಕರಣದ ಹೊಣೆ ಹೊತ್ತಿರುವಾಗ, ಪ್ರತ್ಯೇಕ ಹಲಾಲ್ ಪ್ರಮಾಣಪತ್ರದ ಅಗತ್ಯ ಏನಿದೆ ? ಇಂದಿನ ಸ್ಥಿತಿಯಲ್ಲಿ ಮ್ಯಾಕ್‌ಡೊನಾಲ್ಡ್ಸ್, ಕೆಎಫ್‌ಸಿ, ಬರ್ಗರ್ ಕಿಂಗ್, ಪಿಜ್ಜಾ ಹಟ್ ಮುಂತಾದ ಪ್ರಸಿದ್ಧ ಬ್ರಾಂಡ್‌ಗಳ ಔಟ್‌ಲೆಟ್‌ಗಳಲ್ಲಿ ಹಲಾಲ್ ಹೊರತುಪಡಿಸಿ ಇತರ ಆಹಾರಗಳು ಲಭ್ಯವಿಲ್ಲದ ಕಾರಣ, ಹಿಂದೂ, ಜೈನ್, ಸಿಖ್ ಮುಂತಾದ ಮುಸ್ಲಿಮೇತರ ಸಮುದಾಯಗಳು ಹಲಾಲ್ ಆಹಾರವನ್ನು ಬಲವಂತವಾಗಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ಹಲಾಲ್ ವಿರೋಧಿ ಸಮಿತಿ’ಯ ಸ್ಥಾಪನೆ :
ಹಲಾಲ್ ಆರ್ಥಿಕತೆಯನ್ನು ಸಂಘಟಿತವಾಗಿ ವಿರೋಧಿಸುವ ಅಗತ್ಯವನ್ನು ಕಂಡು, ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶನದಲ್ಲಿ ಪ್ರತಿ ಜಿಲ್ಲೆಯಲ್ಲಿ ಹಲಾಲ್ ವಿರೋಧಿ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯಲ್ಲಿ ವ್ಯಾಪಾರಿಗಳು, ವಕೀಲರು, ಮಾಹಿತಿ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ದೇಶಪ್ರೇಮಿ ನಾಗರಿಕರು, ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರನ್ನು ಸೇರಿಸಿ, ಹಲಾಲ್ ಆರ್ಥಿಕತೆಯ ವಿರುದ್ಧ ಚಳುವಳಿಯನ್ನು ಪ್ರಾರಂಭಿಸಲಾಗಿದೆ.
ಹಲಾಲ್ ಪ್ರಮಾಣಿಕರಣದ ವ್ಯವಸ್ಥೆಯನ್ನು ಕಿತ್ತು ಹಾಕಲು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡೋಣ !
ಹಲ್ದೀರಾಂ, ಹಿಮಾಲಯ, ನೆಸ್ಟ್ಲೆ ಯಂತಹ ಹಲವು ಕಂಪನಿಗಳು ತಮ್ಮ ಸಸ್ಯಾಹಾರಿ ಉತ್ಪನ್ನಗಳನ್ನು ಹಲಾಲ್ ಎಂದು ಪ್ರಮಾಣೀಕರಿಸಿ ಮಾರಾಟ ಮಾಡುತ್ತಿವೆ. ಈ ಹಲಾಲ್ ಬಾಧ್ಯತೆಯ ಅಗತ್ಯವೇನು ? ಭಾರತದಲ್ಲಿ ಹಿಂದೂಗಳಿಗೆ ತಿನ್ನಲು ಅಥವಾ ಖರೀದಿಸಲು ಸಂವಿಧಾನಾತ್ಮಕ ಹಕ್ಕು ಇರಬಾರದೇ ? ಆದ್ದರಿಂದ ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪನ್ನಗಳನ್ನು ಖರೀದಿಸದೆ, ಈ ಬಾರಿ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಹಲಾಲ್ ಮುಕ್ತ ದೀಪಾವಳಿಯಾಗಿ ಆಚರಿಸಬೇಕು. ಚೀನಾ ಉತ್ಪನ್ನಗಳ ಮೇಲಿನ ಬಹಿಷ್ಕಾರದಂತೆ ಈ ಹಲಾಲ್ ಆರ್ಥಿಕತೆಯನ್ನೂ ವಿರೋಧಿಸಬೇಕು.
ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣಪತ್ರವುಳ್ಳ ಆಹಾರ ಉತ್ಪನ್ನಗಳ ಮಾರಾಟಕ್ಕೆ ನಿಷೇಧ !
ದೇಶದಲ್ಲಿ ಕೇವಲ 15% ಮುಸ್ಲಿಂ ಸಮುದಾಯಕ್ಕೆ ಇಸ್ಲಾಮ್ ಆಧಾರಿತ ಹಲಾಲ್ ಆಹಾರಗಳ ಅಗತ್ಯವಿದೆ, ಅದಕ್ಕಾಗಿ ಉಳಿದ 85% ಇಸ್ಲಾಮೇತರರ ಮೇಲೆ ಇದನ್ನು ಹೇರುವುದು ಅವರ ಧಾರ್ಮಿಕ ಮತ್ತು ಗ್ರಾಹಕ ಹಕ್ಕುಗಳ ಉಲ್ಲಂಘನೆಯಾಗಿದೆ. ಆಹಾರ ಮತ್ತು ಉತ್ಪನ್ನಗಳನ್ನು ಪ್ರಮಾಣೀಕರಿಸುವ ಅಧಿಕಾರ ಸರ್ಕಾರಕ್ಕೆ ಮಾತ್ರವೇ ಹೊರತು ಖಾಸಗಿ ಸಂಸ್ಥೆಗಳಿಗಲ್ಲ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವು ಖಾಸಗಿ ಇಸ್ಲಾಮಿಕ್ ಸಂಸ್ಥೆಗಳು ಅನಧಿಕೃತವಾಗಿ ಹಲಾಲ್ ಪ್ರಮಾಣಪತ್ರ ನೀಡಿ ವ್ಯಾಪಾರಿಗಳಿಂದ ಭಾರಿ ಶುಲ್ಕ ವಸೂಲು ಮಾಡುತ್ತಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಲಾಲ್ ಪ್ರಮಾಣಪತ್ರದ ಹೆಸರಲ್ಲಿ ಹಣ ವಸೂಲಿಸುವ ಖಾಸಗಿ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಹಲಾಲ್ ಪ್ರಮಾಣಪತ್ರದ ಮೂಲಕ ಇಸ್ಲಾಮಿಕ್ ಸಂಸ್ಥೆಗಳು ಸಂಗ್ರಹಿಸುತ್ತಿರುವ ಹಣವನ್ನು ಉಗ್ರ ಸಂಘಟನೆಗಳು ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಆದಿತ್ಯನಾಥ ಅವರು ಕೂಡಲೇ ಕ್ರಮಕೈಗೊಳ್ಳಲು ಆದೇಶಿಸಿದ್ದಾರೆ. ಛತ್ತೀಸ್ ಗಢದ ಉಪ ಮುಖ್ಯಮಂತ್ರಿ ವಿಜಯ ಶರ್ಮ ಕೂಡ ಹಲಾಲ್ ಉತ್ಪನ್ನಗಳ ನಿಷೇಧದ ಭರವಸೆ ನೀಡಿದ್ದಾರೆ. ಯೋಗಿ ಆದಿತ್ಯನಾಥ ಅವರ ಈ ಹೆಜ್ಜೆಯಿಂದ ಪ್ರೇರಣೆ ಪಡೆದು, ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳು ಕೂಡ ಇದನ್ನು ಅನುಸರಿಸಬೇಕು.
ಬಂಧು ಭಗಿನಿಯರೇ, ನೆನಪಿಡಿ – “ನಮ್ಮ ಹಬ್ಬ, ನಮ್ಮ ಖರೀದಿ, ನಮ್ಮ ಜನ !”:
ದೇಶದ ಭದ್ರತೆಗಾಗಿ ಅನಧಿಕೃತ ಹಲಾಲ್ ಆರ್ಥಿಕತೆ ವಿರುದ್ಧ ಹಿಂದು ರಾಷ್ಟ್ರ ಸಮನ್ವಯ ಸಮಿತಿಯು ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಆರಂಭಿಸಿದೆ ಮತ್ತು ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ. ಪ್ರತಿಯೊಬ್ಬ ಹಿಂದೂ ಕೂಡ ದೀಪಾವಳಿಯ ವೇಳೆ ಹಲಾಲ್ ಪ್ರಮಾಣೀಕರಣದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಸರ್ಕಾರಕ್ಕೆ ಮನವಿ ಸಲ್ಲಿಸಬೇಕು, ಮತ್ತು ಹಲಾಲ್ ಮುಕ್ತ ದೀಪಾವಳಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. Hindujagruti.org ವೆಬ್‌ಸೈಟ್‌ನಲ್ಲಿ ನಡೆಯುತ್ತಿರುವ Sign Petition ಅಭಿಯಾನದಲ್ಲಿ ಸಹ ಭಾಗವಹಿಸಿ. ರಾಷ್ಟ್ರವಿರೋಧಿ ಹಲಾಲ್ ಆರ್ಥಿಕತೆಯನ್ನು ಸಮರ್ಥಿಸದಿರಿ ! ಹಲಾಲ್ ಪ್ರಮಾಣಿತ ಸಿಹಿ, ಆಹಾರ, ಉಡುಗೊರೆ, ಸೌಂದರ್ಯ ಉತ್ಪನ್ನಗಳು ಇತ್ಯಾದಿಗಳನ್ನು ಖರೀದಿಸಬೇಡಿ. ಮ್ಯಾಕ್ಡೊನಾಲ್ಡ್ಸ್ ಮುಂತಾದ ಹಲಾಲ್ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳ ಬಹಿಷ್ಕಾರ ಮಾಡಿ ! ಹಲಾಲ್ ಆರ್ಥಿಕತೆಯ ಹಾನಿಕರ ಪರಿಣಾಮಗಳ ಬಗ್ಗೆ ಇತರರನ್ನು ಜಾಗೃತಗೊಳಿಸಿ.
ಹಿಂದೂ ಜಾಗೃತರಾಗಿದರೆ ಯಶಸ್ಸು ಖಚಿತ !
ಆಹಾರ ಪದಾರ್ಥಗಳು ಮತ್ತು ಇತರ ಉತ್ಪನ್ನಗಳ ಪ್ರಮಾಣೀಕರಣದ ಹಕ್ಕು ಕೇವಲ ‘ಭಾರತೀಯ ಆಹಾರ ಭದ್ರತಾ ಮತ್ತು ಮಾನದಂಡ ಪ್ರಾಧಿಕಾರ’ (FSSAI) ಮತ್ತು ‘ಆಹಾರ ಮತ್ತು ಔಷಧಿ ಆಡಳಿತ’ (FDA) ಸರಕಾರಿ ಸಂಸ್ಥೆಗಳಿಗಷ್ಟೇ ಇದೆ, ಆದರೆ ಇದರ ಹೊರತಾಗಿಯೂ ಅನಧಿಕೃತವಾಗಿ ಹಲಾಲ್ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಈ ಹಲಾಲ್ ಪ್ರಮಾಣಪತ್ರಕ್ಕಾಗಿ ಪ್ರಥಮ ಬಾರಿಗೆ ₹21,500 ಹಾಗೂ ಪ್ರತಿ ವರ್ಷ ನವೀಕರಣಕ್ಕೆ ₹15,000 ವಿಧಿಸಲಾಗುತ್ತದೆ. ಹಲಾಲ್ ಉತ್ಪನ್ನಗಳಿಂದ ಬರುವ ಮೊತ್ತವನ್ನು ಭಯೋತ್ಪಾದಕರ ಬಿಡುಗಡೆಗಾಗಿ ಬಳಸಲಾಗುತ್ತದೆ. ಇದನ್ನು ತಡೆಯಲು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’, ‘ಹಲಾಲ್ ಹೇರಿಕೆ ವಿರೋಧಿ ಕೃತಿ ಸಮಿತಿ’, ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ಇತರ ಸಮಾನ ಮನಸ್ಕ ಸಂಸ್ಥೆಗಳು ಈ ವರ್ಷ ದೇಶದಾದ್ಯಂತ ‘ನಮ್ಮ ದೀಪಾವಳಿ, ಹಲಾಲ್ ಮುಕ್ತ ದೀಪಾವಳಿ’ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನ ಈ ಅಭಿಯಾನದ ಅಡಿಯಲ್ಲಿ
ಹಲಾಲ್ ಹೇರಿಕೆ ವಿರೋಧಿ ಚಳುವಳಿ, ವ್ಯಾಪಾರಿ ಸಭೆಗಳು, ಮಂಡಳಿಗಳ ಸಭೆಗಳು, ಆನ್‌ಲೈನ್ ಅರ್ಜಿಗಳು, ಜಾಗೃತಿಪರಿ ಪೋಸ್ಟರ್‌ಗಳು, ವ್ಯಾಖ್ಯಾನಗಳು, Sign Petition, ಪತ್ರಿಕೆ ವಿತರಣೆ ಮತ್ತಿತರ ಕಾರ್ಯಗಳ ಮೂಲಕ ಜನಜಾಗೃತಿ ಮಾಡಲಾಗುತ್ತಿದೆ. ಈ ಅಭಿಯಾನದಲ್ಲಿ ಎಲ್ಲರನ್ನು ರಾಷ್ಟ್ರಭಾವದಿಂದ ಭಾಗವಹಿಸಲು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕರೆ ನೀಡಿದೆ.
ಸಂಗ್ರಹ:ಸಂಯೋಜಕರು, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ