ಸುರತ್ಕಲ್: ಕೃಷ್ಣಾಪುರ ಮುಸ್ಲಿಂ ಜಮಾತ್‌ಗೆ ಒಳಪಡುವ ಕಾಟಿಪಳ್ಳ 3ನೇ ಬ್ಲಾಕ್‌ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಭಾನುವಾರ ತಡರಾತ್ರಿ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು, ಮುಂಚೂರು ನಿವಾಸಿ ಸುಜಿತ್ ಬಂಧಿತ ಆರೋಪಿಗಳು.
ಬಂಧಿತರಲ್ಲಿ ಆರೋಪಿ ಭರತ್ ಎಂಬಾತನ ವಿರುದ್ಧ ಈಗಾಗಲೇ ಪ್ರಕರಣಗಳಿದ್ದು, ಆತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಭಾನುವಾರ ರಾತ್ರಿ ಎರಡು ಬೈಕ್‌ಗಳಲ್ಲಿ ಬಂದಿದ್ದ ಕಿಡಿಗೇಡಿಗಳು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿದ್ದರು.