ಕಾಸರಗೋಡು: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಕುಂಬಳೆ ಪಂಚಾಯತ್ ಸಮಿತಿಯ ವತಿಯಿಂದ ದಿ!ನಾರಾಯಣ ಮಾಸ್ಟರ್ ಕಮಾರ್ತೆ ಸಂಸ್ಮರಣಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳತ್ತೂರಿನಲ್ಲಿ ಜರಗಿತು.
ಸಭೆಯ ಅಧ್ಯಕ್ಷ ಸ್ಥಾನವನ್ನು ಗಂಗಾಧರ ಕೆ ಟಿ ವಹಿಸಿದರು. ಕುಲಶೇಖರ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ರಾದ ಪ್ರೇಮಾನಂದ ಕುಲಾಲ ಕೋಡಿಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮದ ಮುಖೇನ ಸಮಾಜ ಬಾಂಧವರನ್ನು ಒಗ್ಗೂಡಿಸಿ ನಮ್ಮ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಧ್ಯ. ಈ ರೀತಿಯ ಕಾರ್ಯಕ್ರಮಗಳು ಇನ್ನು ಮುಂದೆಯೂ ನಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಗೀತಾ ಮನೋಜ್ ಮರೊಳಿ ಹಾಗೂ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಇವರು ಭಾಗವಹಿಸಿದರು. ಸಭೆಯಲ್ಲಿ ಭಾರತಿ ಉಳಕರೆ, ಸುಂದರಿ ಕಮಾರ್ತೆ , ದಯಾನಂದ ಮುಜಂಗಾವು, ಯು.ಎಂ. ಮೂಲ್ಯ ಕಿದೂರು ಉಪಸ್ಥಿತರಿದ್ದರು. ನಾರಾಯಣ ಕಳತ್ತೂರು ಸ್ವಾಗತಿಸಿ ಅಶೋಕ ಪುಣಿಯೂರು ಧನ್ಯವಾದ ಸಮರ್ಪಿಸಿದರು. ಕೃಷ್ಣ ಕಳತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
ಮದ್ಯಾಹ್ನ ಭೋಜನದ ಬಳಿಕ ಕುಲಾಲ ಪ್ರತಿಭೆಗಳಿಂದ ಕುಲಾಲ ಕುಸಲ್ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರಗಿತು.