Wednesday, January 15, 2025
Homeಅಂತಾರಾಷ್ಟ್ರೀಯನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ: ದೆಹಲಿ-ಎನ್‌ಸಿಆರ್, ಬಿಹಾರದಲ್ಲೂ ಕಂಪನದ ಅನುಭವ

ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ: ದೆಹಲಿ-ಎನ್‌ಸಿಆರ್, ಬಿಹಾರದಲ್ಲೂ ಕಂಪನದ ಅನುಭವ

ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆಯ ದಾಖಲಾಗಿದೆ.

ಭೂಕಂಪದ ಕೇಂದ್ರಬಿಂದು ಚೀನಾದ ಡಿಂಗ್ಗಿಯಾಗಿದ್ದು, ಇದರಿಂದ ಬಿಹಾರ, ದೆಹಲಿ-ಎನ್​ಸಿಆರ್​ ಮೇಲೂ ಹೆಚ್ಚು ಪರಿಣಾಮ ಬೀರಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ನೇಪಾಳ-ಟಿಬೆಟ್ ಗಡಿಯ ಬಳಿ ಲೊಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ. ದೂರದಲ್ಲಿ ಬೆಳಗ್ಗೆ 6.35ಕ್ಕೆ ಸಂಭವಿಸಿದೆ.

ನೇಪಾಳದಲ್ಲಿ ಹುಟ್ಟಿಕೊಂಡ ಭೂಕಂಪ ನಂತರ ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ಕೆಲವು ಭಾಗಗಳು ಸೇರಿದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಬಲವಾದ ಕಂಪನದ ಅನುಭವವನ್ನುಂಟು ಮಾಡಿದೆ.
ಪ್ರಮಾಣವನ್ನು ಇನ್ನೂ ದೃಢೀಕರಿಸಬೇಕಾಗಿದ್ದರೂ, ಆರಂಭಿಕ ಅಂದಾಜುಗಳು ರಿಕ್ಟರ್ ಮಾಪಕದಲ್ಲಿ 6.0 ಮತ್ತು 7.0ರ ನಡುವೆ ಇರಬಹುದೆಂದು ಸೂಚಿಸುತ್ತವೆ.

ಕಾವ್ರೆಪಲಾಂಚ್‌ವೋಕ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಕಠ್ಮಂಡುವಿನಲ್ಲಿ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದಿದು, ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

RELATED ARTICLES
- Advertisment -
Google search engine

Most Popular