Friday, February 14, 2025
Homeಕಾರ್ಕಳಅಕ್ರಮ ಮರಳು ಸಾಗಾಟದಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ

ಅಕ್ರಮ ಮರಳು ಸಾಗಾಟದಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ

ಕಾರ್ಕಳ : ತಾ 3, 2025ರ ಶುಕ್ರವಾರದಂದು ಬೆಳಿಗ್ಗೆ ಸುಮಾರು 11:20 ಗಂಟೆಗೆ ಫಿರ್ಯಾದುದಾರರು ಸಿಬ್ಬಂದಿಯವರೊಂದಿಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿಯು ಕೆಎ.19 ಡಿ. 9245 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು. ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧವನ್ನು ಉಂಟು ಮಾಡಲು ಟಿಪ್ಪರ್ ಲಾರಿಗೆ ಬೆಂಗಾವಲು ಮಾಡುತ್ತಿದ್ದ ಕೆಎ, 19 ಎಮ್‌‌ಬಿ. 7472 ನೇ ನಂಬ್ರದ ರಿಡ್ಜ್ ಕಾರು ಚಾಲಕ ಟಿಪ್ಪರ್ ಲಾರಿ ಬೆನ್ನಟ್ಟುವಾಗ ಒಮ್ಮೆಲೇ ಇಲಾಖಾ ವಾಹನದ ಮುಂದೆ ಚಲಾಯಿಸಿ ಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ಆರೋಪಿತರು ಸಂಘಟಿತರಾಗಿ ಕೃತ್ಯ ಉಂಟು ಮಾಡಿ ತಡೆಯುಂಟು ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಆರೋಪಿ ಸೈಯದ್‌ ಸೈಫ್‌ (22) ಬಂಧಿಸಲಾಗಿದೆ. ಆರೋಪಿಯು ಬಿ. ಫಾರ್ಮ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular