Wednesday, October 9, 2024
Homeರಾಜ್ಯಎಣ್ಣೆ ಹೊಡೆದು ಕಾಲೇಜಿಗೆ ಬಂದ ವಿದ್ಯಾರ್ಥಿ‌ | ಒಳಗೆ ಬಿಡಲಿಲ್ಲವೆಂದು ಸೆಕ್ಯುರಿಟಿಗೆ ಚೂರಿಯಿಂದ ಇರಿದು ಕೊಲೆ!

ಎಣ್ಣೆ ಹೊಡೆದು ಕಾಲೇಜಿಗೆ ಬಂದ ವಿದ್ಯಾರ್ಥಿ‌ | ಒಳಗೆ ಬಿಡಲಿಲ್ಲವೆಂದು ಸೆಕ್ಯುರಿಟಿಗೆ ಚೂರಿಯಿಂದ ಇರಿದು ಕೊಲೆ!

ಬೆಂಗಳೂರು: ಎಣ್ಣೆ ಹೊಡೆದು ಕಾಲೇಜಿಗೆ ಬಂದಿದ್ದ ತನ್ನನ್ನು ಕಾಲೇಜಿನೊಳಗೆ ಬಿಡಲಿಲ್ಲವೆಂದು ಕಾಲೇಜಿನ ಸೆಕ್ಯುರಿಟಿ ಇನ್‌ಚಾರ್ಜ್‌ಗೆ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದು ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ. ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿ ಕುಡಿತದ ಚಟಕ್ಕೆ ಬಿದ್ದಿದ್ದ. ಕಾಲೇಜಿಗೆ ಮದ್ಯಪಾನ ಮಾಡಿಯೇ ಬರುತ್ತಿದ್ದ. ಹೆಬ್ಬಾಳ ಕೆಂಪಾಪುರದ ಸಿಂಧಿ ಕಾಲೇಜಿನ ವಿದ್ಯಾರ್ಥಿಯಾದ ಈತ ಕುಡಿತದ ನಶೆಯಲ್ಲಿ ಕಾಲೇಜಿಗೆ ಆಗಮಿಸಿದ್ದ. ಈ ವೇಳೆ ತನ್ನನ್ನು ಕಾಲೇಜಿನೊಳಗೆ ಬಿಡಲಿಲ್ಲವೆಂದು ಸೆಕ್ಯುರಿಟಿ ಇನ್‌ಚಾರ್ಜ್‌ಗೆ ಚೂರಿಯಿಂದ ಇರಿದು ಬರ್ಬರ ಹತ್ಯೆ ಮಾಡಿದ್ದಾನೆ.
ಬುಧವಾರ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ಬಿಹಾರ ಮೂಲದ ಜೈ ಕಿಶೋರ್‌ ರಾಯ್‌ ಕೊಲೆಯಾದ ದುರ್ದೈವಿ. ಕಿಶೋರ್‌ ಸಿಂಧಿ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಸೆಕ್ಯುರಿಟಿ ಇನ್‌ಚಾರ್ಜ್‌ ಆಗಿದ್ದರು. ಇದೇ ಕಾಲೇಜಿನಲ್ಲಿ ಅಸ್ಸಾಂ ಮೂಲದ ಭಾರ್ಗವ್‌ ಎಂಬಾತ ಫೈನಲ್‌ ಇಯರ್‌ ಬಿಎ ವ್ಯಾಸಾಂಗ ಮಾಡುತ್ತಿದ್ದ. ಕುಡಿದು ಬಂದ ಆತನನ್ನು ಕಿಶೋರ್‌ ಕಾಲೇಜಿನೊಳಗೆ ಬಿಟ್ಟಿಲ್ಲ. ಇದರಿಂದ ಕುಪಿತನಾದ ಭಾರ್ಗವ್‌ ಪಕ್ಕದ ಅಂಗಡಿಗೆ ಹೋಗಿ ಚಾಕು ಖರೀದಿ ಮಾಡಿ ಬಂದಿದ್ದಾನೆ. ಮತ್ತೆ ಕಾಲೇಜಿನೊಳಗೆ ಹೋಗಲು ಯತ್ನಿಸಿದ್ದಾನೆ. ಆಗಲೂ ಕಿಶೋರ್‌ ತಡೆದುದರಿಂದ ಚಾಕು ತೆಗೆದು ಸೆಕ್ಯುರಿಟಿ ಎದೆಗೆ ನಾಲ್ಕೈದು ಬಾರಿ ಇರಿದಿದ್ದಾನೆ. ಗಂಭೀರ ಗಾಯಗೊಂಡ ಕಿಶೋರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

RELATED ARTICLES
- Advertisment -
Google search engine

Most Popular