Monday, July 15, 2024
Homeಅಪರಾಧವಿದ್ಯಾರ್ಥಿನಿ ಪ್ರಬುದ್ದ್ಯಾ ನಿಗೂಢ ಸಾವು ಪ್ರಕರಣ: ತಾಯಿ ದೂರಿನನ್ವಯ ಕೊಲೆ ಪ್ರಕರಣ ದಾಖಲು

ವಿದ್ಯಾರ್ಥಿನಿ ಪ್ರಬುದ್ದ್ಯಾ ನಿಗೂಢ ಸಾವು ಪ್ರಕರಣ: ತಾಯಿ ದೂರಿನನ್ವಯ ಕೊಲೆ ಪ್ರಕರಣ ದಾಖಲು

ಬೆಂಗಳೂರು: ಇತ್ತೀಚೆಗೆ ನಡೆದ ಪದವಿ ವಿದ್ಯಾರ್ಥಿನಿ ಪ್ರಬುದ್ದ್ಯಾ ನಿಗೂಢ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ವಿದ್ಯಾರ್ಥಿನಿಯ ತಾಯಿ ನೀಡಿರುವ ದೂರಿನನ್ವಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗಳದ್ದು ಆತ್ಮಹತ್ಯೆಯಲ್ಲ. ಕೊಲೆ ಅಂತ ತಾಯಿ ಕೆ.ಆರ್. ಸೌಮ್ಯ ಆರೋಪಿಸಿದರು. ಈ ಬಗ್ಗೆ ದೂರನ್ನೂ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಪುರಂ ಪೊಲೀಸರು ಐಪಿಸಿ ಸೆಕ್ಷನ್ 302ರಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮೇ 15ರಂದು 20 ವರ್ಷದ ಪ್ರಬುದ್ದ್ಯಾ ಮೃತದೇಹ ಮನೆಯ ಬಾತ್ ರೂಂನಲ್ಲಿ ಪತ್ತೆಯಾಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಪೊಲೀಸರು ಶಂಕಿಸಿದ್ದರು. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ನನ್ನ ಮಗಳ ಕತ್ತು ಮತ್ತು ಕೈಯನ್ನು ಚಾಕುವಿನಿಂದ ಕುಯ್ದು ಕ್ರೂರವಾಗಿ ಕೊಲೆ ಮಾಡಲಾಗಿದೆ. ಮುಖಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ಹೊಡೆಯಲಾಗಿದೆ. ಹೀಗಾಗಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ತಾಯಿ ದೂರು ದಾಖಲಿಸಿದ್ದರು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿರುವ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಿದ್ದಾರೆ.

RELATED ARTICLES
- Advertisment -
Google search engine

Most Popular