ಏಕಲವ್ಯ ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಆಳ್ವಾಸ್ ನ ವಿದ್ಯಾರ್ಥಿಗಳು

0
19


ವರದಿ ರಾಯಿ ರಾಜ ಕುಮಾರ
ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು ಆರು ಜನರಿಗೆ ಏಕಲವ್ಯ ಪ್ರಶಸ್ತಿ ಹಾಗೂ 25 ಜನರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಈವರೆಗೆ ಲಭಿಸಿರುತ್ತದೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಕ್ರೀಡಾ ಇಲಾಖೆ, ಕ್ರೀಡಾಕ್ಷೇತ್ರದಲ್ಲಿ ಮಹೋನ್ನತವಾದ ಗಣನೀಯ ಸಾಧನೆಯನ್ನು ಗೈದ ಕ್ರೀಡಾಪಟುಗಳಿಗೆ ಕೊಡಮಾಡುವ ರಾಜ್ಯದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯನ್ನು ಪಡೆದಾಕೆ 2022- 23ನೇ ಸಾಲಿನಲ್ಲಿ ವೈಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಷಾ ಬಿ ಎನ್. ಅದೇ ರೀತಿ 2023ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆಯುತ್ತಿರುವ ನಾಲ್ವರು ಕ್ರೀಡಾಪಟುಗಳು ದಿವ್ಯ, ಮೇಘನಾ, ಶಂಕ್ರಪ್ಪ, ಹಾಗೂ ಆತ್ಮೀಯ. ಇವರಲ್ಲಿ ಇಬ್ಬರು ಬಾಲ್ ಬ್ಯಾಡ್ಮಿಂಟನ್ ಹಾಗೂ ಒಬ್ಬರು ಮಲ್ಲಕಂಬ ಮತ್ತು ಇನ್ನೊಬ್ಬರು ಕಬಡ್ಡಿ ವಿಭಾಗದಲ್ಲಿ ಆಯ್ಕೆಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಡಿಸೆಂಬರ್ ಒಂದರಂದು ಬೆಂಗಳೂರಿನಲ್ಲಿ ಇವರೆಲ್ಲರಿಗೂ ಕರ್ನಾಟಕ ಸರ್ಕಾರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿರುತ್ತದೆ. ಇದುವರೆಗೆ ಬಾಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಆಳ್ವಾಸ್ ನ ಒಟ್ಟು 11 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿರುತ್ತದೆ. ಈ ಪ್ರಕಾರ ಒಂದೇ ಸಂಸ್ಥೆಯಲ್ಲಿ ಇಷ್ಟೊಂದು ಏಕಲವ್ಯ ಹಾಗೂ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿರುವ ಏಕ ಮಾತ್ರ ಸಂಸ್ಥೆ ಮೂಡುಬಿದರೆಯ ಆಳ್ವಾಸ್ .
*ಏಕಲವ್ಯ ಪ್ರಶಸ್ತಿ ವಿಜೇತೆ:- ಉಷಾ ಬಿ ಎನ್ : ಮೂಲತಃ ಹಾಸನದವರು. ಇಂಗ್ಲೆಂಡ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಆರನೇ ಸ್ಥಾನ, ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ಸೀನಿಯರ್ ನ್ಯಾಷನಲ್ ವೈಟ್ ಲಿಫ್ಟಿಂಗ್ ನಲ್ಲಿ ಮೂರು ಚಿನ್ನ, ಮೂರು ಕಂಚು, ನ್ಯಾಷನಲ್ ಗೇಮ್ಸ್ ನಲ್ಲಿ ಎರಡು ಬೆಳ್ಳಿ, ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ನಲ್ಲಿ ಚಾಂಪಿಯನ್ಶಿಪ್ ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ, ಆಲ್ ಇಂಡಿಯಾ ಇಂಟರ್ ಸಿಟಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 2023ರಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ ನೀಡುವ ಕೆ ಜಿ ಎಂ ಪ್ರಶಸ್ತಿಯನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರು
ಮಲ್ಲಕಂಬದಲ್ಲಿ:- ಶಂಕರಪ್ಪ:- ಇವರು ಮೂಲತಃ ಬಳ್ಳಾರಿಯವರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಲ್ಲಕಂಬ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ, ಗುಜರಾತ್ ನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಲ್ಲಕಂಬ ಸ್ಪರ್ಧೆ ಹಾಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ನಾಲ್ಕು ಚಿನ್ನ, ಮೂರು ಬೆಳ್ಳಿ, ಒಂದು ಕಂಚು ಹಾಗೂ ಮೊದಲ ಸೌತ್ ಜೋನ್ ಮಲ್ಲಕಂಬ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದರು.
ಬಾಲ್ ಬ್ಯಾಡ್ಮಿಂಟನ್:– ನಲ್ಲಿ ದಿವ್ಯ ಎಂ ಎಸ್: ಮೂಲತಃ ಕೆ ಆರ್ ಪೇಟೆ ಮಂಡ್ಯದವರಾಗಿದ್ದು ಆರು ಬಾರಿ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಚಿನ್ನದ ಪದಕ, ಸೀನಿಯರ್ ನ್ಯಾಷನಲ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಎರಡು ಚಿನ್ನ, ಎರಡು ಬೆಳ್ಳಿ, ನಾಲ್ಕು ಬಾರಿ ಫೆಡರೇಷನ್ ಕಪ್ ನಲ್ಲಿ ಚಿನ್ನದ ಪದಕ ಜೂನಿಯರ್ ನ್ಯಾಷನಲ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದ್ದರು.
ಮೇಘನಾ ಎಚ್ ಎಮ್: ಮೂಲತಃ ತುಮಕೂರಿನವರಾದ ಇವರು ಆರು ಬಾರಿ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಚಿನ್ನದ ಪದಕ, ಸೀನಿಯರ್ ನ್ಯಾಷನಲ್ ಬಾಲ್ ಬ್ಯಾಟ್ಮಿಂಟನ್ ನಲ್ಲಿ ಎರಡು ಚಿನ್ನ, ಎರಡು ಬೆಳ್ಳಿ, ನಾಲ್ಕು ಬಾರಿ ಫೆಡರೇಶನ್ ಕಪ್ನಲ್ಲಿ ಚಿನ್ನದ ಪದಕ, ಜೂನಿಯರ್ ನ್ಯಾಷನಲ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿದ್ದರು.
ಕಬಡ್ಡಿಯಲ್ಲಿ:- ಆತ್ಮೀಯ ಎಂ ಬಿ : ಹಾಸನ ಮೂಲದ ಇವರು ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು. 38ನೇ ರಾಷ್ಟ್ರೀಯ ಗೇಮ್ಸ್ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು. 70 ನೆ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಸೀನಿಯರ್ ಭಾರತೀಯ ಮಹಿಳಾ ತರಬೇತಿ ಶಿಬಿರಕ್ಕೆ ಆಯ್ಕೆಗೊಂಡಿದ್ದರು. 69 ನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡದ ಕ್ಯಾಪ್ಟನ್ ಆಗಿ ಭಾಗವಹಿಸಿ ಎರಡು ಬಾರಿ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಮೆಂಟ್ ನಲ್ಲಿ ಪ್ರಥಮ ಸ್ಥಾನ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಿದ್ದಾರೆ. ಆಲ್ ಇಂಡಿಯಾ ಇಂಟರ್ ಸಿಟಿ ಕಬಡ್ಡಿ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದರು.
ವಿಶೇಷತೆಗೆ ಕಾರಣ:-
ಆಳ್ವಾಸ್ ಸಂಸ್ಥೆಯಲ್ಲಿ ಸೇರಿದಾಗಿನಿಂದ ಕನಿಷ್ಠ ಹತ್ತು ಹನ್ನೆರಡು ವರ್ಷಗಳ ಕಾಲ ನಿರಂತರ ತರಬೇತಿ, ಎಲ್ಲ ರೀತಿಯ ಬೆಂಬಲ, ಪ್ರತಿಯೊಂದು ಹಂತದಲ್ಲಿ ಸಾಕಷ್ಟು ಪ್ರೋತ್ಸಾಹಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿರುವುದರಿಂದ ಕಳೆದ ಎಂಟು ಹತ್ತು ವರ್ಷಗಳಿಂದ ಸತತವಾಗಿ ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳು ಆಳ್ವಾಸ್ ನ ಕ್ರೀಡಾಪಟುಗಳನ್ನು ಹುಡುಕಿಕೊಂಡು ಬರುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಹೆಮ್ಮೆಯ ಈ ಸಂಗತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಮೋಹನ್ ಆಳ್ವ ತರಬೇತುದಾರರ ಸತತ ಪರಿಶ್ರಮ ಹಾಗೂ ಕ್ರೀಡಾಳುಗಳ ನಿರಂತರ ಪ್ರಯತ್ನದಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ ಎಂದು ಸಂಭ್ರಮ ಪಟ್ಟರು.
.

LEAVE A REPLY

Please enter your comment!
Please enter your name here