ದಾವಣಗೆರೆ : ದಾವಣಗೆರೆ ಏಪ್ರಿಲ್ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಲ್ಲಿ ನಮ್ಮ ಸನಾತನ ಧರ್ಮ, ಇತಿಹಾಸ, ಪರಂಪರೆ, ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ವಿಷಾದ ಸಂಗತಿ. ವಿದ್ಯಾರ್ಥಿಗಳು ಶಿಕ್ಷಣದ
ಜೊತೆಯಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ದಾವಣಗೆರೆಯ ಕಲಾಕುಂಚ ಸಂಸ್ಥೆ ಕೇವಲ ದಾವಣಗೆರೆಗೆ ಸೀಮಿತವಾಗದೆ ನೆರೆ ರಾಜ್ಯಗಳಲ್ಲಿ, ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ವೈಭವೀಕರಿಸುತ್ತಿರುವುದು ಶ್ಲಾಘನೀಯ ಎಂದು ಹಾವೇರಿ ಜಿಲ್ಲಾ ರಾಣೇಬೆನ್ನೂರಿನ ಖನ್ನೂರು ವಿದ್ಯಾಸಂಸ್ಥೆಯ ಅಧ್ಯಕ್ಷರದ ಡಾ. ಪ್ರವೀಣ್ ಎಂ.ಖನ್ನೂರು ತಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದರು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಹಾವೇರಿ ಜಿಲ್ಲೆಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ರಾಣೇಬೆನ್ನೂರಿನ ಹುಣಸಿಕಟ್ಟೆ ರಸ್ತೆಯಲ್ಲಿರುವ ಖನ್ನೂರ
ವಿದ್ಯಾನಿಕೇತನ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಿನ್ನೆ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಸೀಮಿತವಾಗದೆ ಸಮಯ ಪ್ರಜ್ಞೆಯೊಂದಿಗೆ, ಕರ್ತವ್ಯ ನಿಷ್ಠೆಯಿಂದ, ನಿಸ್ವಾರ್ಥವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಹೋದರೆ ಸಂಘ ಸಂಸ್ಥೆಗಳು ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿ, ಹಾವೇರಿ ಜಿಲ್ಲೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಕೆ.ಸುಬ್ಬರಾವ್, ಕಲಾಕುಂಚ ವಿವಿಧ ಬಡಾವಣೆಗಳ ಶಾಖೆಗಳ ಅಧ್ಯಕ್ಷರುಗಳಾದ ಶಾರದಮ್ಮ ಶಿವನಪ್ಪ,
ಪ್ರಭಾ ರವೀಂದ್ರ, ಲಲಿತ ಕಲ್ಲೇಶ್, ರಾಜಶೇಖರ ಬೆನ್ನೂರು, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ
ಜ್ಯೋತಿ ಗಣೇಶ್‌ಶೆಣೈ, ಯುವ ಗಾಯಕಿ ಕವಯತ್ರಿ ಕವಿತಾ ತಿಮ್ಮೇಶ್ ಮುಂತಾದವರು ಮಾತನಾಡಿ, ಕಲಾಕುಂಚ
ನೂತನ ಶಾಖೆಗೆ ಶುಭ ಕೋರಿದರು. 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲಿ ಕನ್ನಡದಲ್ಲಿ
ಪರಿಪೂರ್ಣ ಅಂಕ ಪಟೆದ ವಿದ್ಯಾರ್ಥಿಗಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಕಲಾಕುಂಚದ ಹಾವೇರಿ ಜಿಲ್ಲಾಧ್ಯಕ್ಷರಾದ ಪರಮೇಶ್ವರಯ್ಯ ವೀರಭದ್ರಯ್ಯ ಮಠದ್‌ರವರು ಪ್ರಾಸ್ತಾವಿಕªವಾಗಿ ಮಾತನಾಡಿ, ಸಂಸ್ಥೆಯ ಮೂರುವರೆ ದಶಕಗಳ ಸಾಂಸ್ಕೃತಿಕ, ಶಿಕ್ಷಣದ ಕಾಳಜಿಯ ಸಾಧನೆಗಳನ್ನು ವಿವರಿಸಿದರು.
ಕನ್ನಡ ನಾಡಗೀತೆಯ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಸ್ವಾಗತ ಕೋರಿದ ವೇದಮೂರ್ತಿ ಗದಿಗೆಯ್ಯ ಸ್ವಾಮಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು, ಕೊನೆಯಲ್ಲಿ ಡಾ|| ಬಸವರಾಜ ಪೂಜಾರ್ ವಂದಿಸಿದರು.