ಅಖಿಲ ಭಾರತಅಂತರ ವಿಶ್ವವಿದ್ಯಾಲಯ ಸಾಫ್ಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಶ್ರೀ ಮಹಾವೀರಕಾಲೇಜಿನ ವಿದ್ಯಾರ್ಥಿಗಳು. ಮಹಾರಾಷ್ಟ್ರ ದ ಅಮ್ರಾವತಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸ್ಪರ್ಧೆಗೆ ಮಂಗಳೂರು ವಿಶ್ವವಿದ್ಯಾಲಯದ ತಂಡಕ್ಕೆ ಶೀ ಮಹಾವೀರಕಾಲೇಜಿನ ವಿದ್ಯಾರ್ಥಿಗಳಾದ ಎಸ್. ಜಿ. ಶಶಿಧರ, ಮೊಹಮ್ಮದ್‌ಜುನೈದ್, ಪ್ರಮೋದ್‌ಸಿ, ಅಭಿಷ್ರುತ್ ಹಾಗೂ ನವ್ಯಶ್ರೀ ಜೈನ್‌ಆಯ್ಕೆಯಾಗಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್ ರೈ ತರಬೇತಿ ನೀಡಿರುತ್ತಾರೆ. ಇವರ ಈ ಸಾಧನೆಗೆಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರುಗಳು, ಅಧ್ಯಾಪಕ, ಅಧ್ಯಾಪಕೇತರವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

