ದಾವಣಗೆರೆ : ವಿದ್ಯಾರ್ಥಿಗಳು ತಾವು ಯಾವುದನ್ನು ಅಭ್ಯಾಸ ಮಾಡಬೇಕೆಂದು ಪ್ಲಾನ್ ಮಾಡಿಕೊಳ್ಳಬೇಕು. ತಮ್ಮ ಅಭ್ಯಾಸವು ಪರಿಶ್ರಮದಲ್ಲಿ ಬಹಳ ಮುಖ್ಯ, ಮುಂದಿನ ಒಳ್ಳೆಯ ಗುರಿಯನ್ನು ಸಾಧಿಸಬೇಕೆಂದು ಸರ್ ಎಂ ವಿ ಕಾಲೇಜಿನ ಸಂಸ್ಥಾಪಕ ಎಸ್‌ಜಿ ಶ್ರೀಧರ್ ಅವರು ಹೇಳಿದರು.
ಅವರು ಸ್ಥಳೀಯ ಪಿಜಿ ರಾಯರ ಮಠದ ಸಭಾಂಗಣದಲ್ಲಿ ವಿಶ್ವ ಮಾದ್ವ ಮಹಾಪರಿಷತ್ ದಾವಣಗೆರೆ ಕೇಂದ್ರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನವನ್ನು ಮಕ್ಕಳಿಗೆ ತಿಳಿಸಿ ನಾನು ದಾವಣಗೆರೆಗೆ ಬಂದು ೩೦ ವರ್ಷವಾಯಿತು ನಾನು ಪ್ರತಿ ದಿವಸ ನಾನು ಏನು ಕೆಲಸ ಮಾಡಬೇಕೆಂದು ನೋಟ್ ಮಾಡಿಕೊಳ್ಳುತ್ತಿದ್ದೆ, ಡೈರಿಯನ್ನು ಸಹ ಬರೆಯುತ್ತಿದ್ದೆ ಸರ್ ಎಂ ಬಿ ಯವರ ಜೀವನ ಹಾಗೂ ಅವರು ನಡೆದ ದಾರಿಯನ್ನು ಅಲ್ಲದೆ ಸಾಧನೆಗಳನ್ನು ತಿಳಿಯ ಪಡಿಸಿದರು.
ಅತಿಥಿಯಾದ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಹಾಗೂ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ|| ಸಂಪನ್ನ ಮುತಾಲಿಕ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಕೇವಲ ನಾನು ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಕೊಳ್ಳದೆ ಬೇರೆ ಬೇರೆ ಒಳ್ಳೆಯ ಅವಕಾಶ ಇರುತ್ತದೆ ಅದರ ಕಡೆಗೆ ಗಮನಹರಿಸಿ ಯಾವತ್ತೂ ಸೋಲಿಗೆ ಹೆದರಬೇಡಿ ಮೊದಲು ನಮಗೆಲ್ಲ ಮುಂದೆ ಗುರಿ ಹಿಂದೆ ಗುರುಗಳು ಇದ್ದರು ತಮ್ಮ ಯಾವುದೇ ಅಭ್ಯಾಸದಲ್ಲಿ ಪರಿಶ್ರಮ ಬಹಳ ಮುಖ್ಯ ಎಂದು ಹೇಳಿ ನಮ್ಮ ಬ್ರಾಹ್ಮಣ ಸಂಪ್ರದಾಯವನ್ನು ಮರೆಯಬೇಡಿರಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಯಾವುದೇ ಆಶ್ರಮಕ್ಕೆ ಸೇರಿಸಬೇಡಿ ಎಂದು ನೇರವಾಗಿ ಅರ್ಥವಾಗುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಡಾ|| ಗೋಪಾಲ ಅಡವಿರಾವ್ ಮುತ್ತಗಿ, ಎನ್ ಕೆ ಕೃಷ್ಣಮೂರ್ತಿ, ಮಠದ ವ್ಯವಸ್ಥಾಪಕ ರಾಮಗೋಪಾಲ್ ರವರು ಸಹ ಮಾತನಾಡಿದರು.
ಈ ಪುರಸ್ಕಾರದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ೨೦೨೩-೨೪ನೇ ಸಾಲಿನ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳು ೯೫% ಬಂದಿರುವ ತನ್ಮಯಿ ಎಸ್, ಶ್ರೀಕರ ಎಂ ರಾವ್, ಸಿಂಚನ ಎಂ, ಶ್ರಾವ್ಯ ಎನ್, ಐಶ್ವರ್ಯ ಎಸ್.ಎಂ., ರಚನಾ ಎಂ ದಾಸ್, ಲಾಸ್ಯ ಪಿ ಎಸ್, ಸಾನಿಧ್ಯ ಎಸ್ ಭಟ್, ಶ್ರೀಗೌರಿ ಎಸ್, ವಸಂದರ ಹೆಗಡೆ, ಶ್ರೀ ಸಾಯಿ ತೇಜಸ್ ಹೆಚ್ ,ಸಂಪ್ರೀತ ಎಸ್, ಸಮ್ಮಿತಾ ಎಸ್ ಮುತಾಲಿಕ್ ಅಮೋಘ ಬಿ ರವರಿಗೆ ಶಾಲು ಹಾರ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಹಾಗೂ ಈ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರನ್ನು ಸಹ ಸನ್ಮಾನಿಸಿದರು.
ಈ ಪುರಸ್ಕಾರಕ್ಕೆ ಶ್ರೀ ಸುತೀರ್ಥ ಕಟ್ಟಿ , ಬೆಂಗಳೂರಿನ ಡಾ|| ಹರ್ಷ ಎಂ ಎಸ್, ಹುಬ್ಬಳ್ಳಿಯ ಡಾ|| ವೆಂಕಟರಾವ್ ರವರು ಹೆಚ್ಚಿನ ಸಹಕಾರ ನೀಡಿರುತ್ತಾರೆ. ಡಾಕ್ಟರ್ ಪಂಡಿತ್ ಶ್ರೀ ವೆಂಕಟಗಿರೀಶಾಚಾರ್ಯರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಜನತಾವಾಣಿಯ ಜ್ಯೋತಿಷ್ಯ ತಜ್ಞರಾದ ಶ್ರೀ ಜಯತೀರ್ಥಾಚಾರ್ ರವರು ವೇದ ಘೋಷ ಮಾಡಿದರು, ಕುಮಾರಿ ಸಮ್ಮಿತಾ ಮುತಾಲಿಕ್ ಪ್ರಾರ್ಥನೆ ಮಾಡಿದರು ಕೆಎಫ್‌ಎಸ್ಸಿ ನಾಗರಾಜ್ ರವರು ಸ್ವಾಗತಿಸಿದರು, ಶ್ರೀ ಕೃಷ್ಣಚಾರ್ ಮಣ್ಣೂರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀ ವೆಂಕಟಗಿರಿ ಬಿ ಡಿ ಸರ್ವರನ್ನು ವಂದಿಸಿದರು.