Saturday, July 20, 2024
Homeಧಾರ್ಮಿಕಯಶಸ್ವಿಯಾದ ಶ್ರೀ ಗಾಯತ್ರಿ ಪೂಜೆ ಉಪಾಸನೆ

ಯಶಸ್ವಿಯಾದ ಶ್ರೀ ಗಾಯತ್ರಿ ಪೂಜೆ ಉಪಾಸನೆ

ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಶ್ರೀ ಗಾಯತ್ರಿ ಪರಿವಾರದಿಂದ ಶ್ರೀ ಬುದ್ಧ ಪೂರ್ಣಿಮೆಯಂದು ಬೆಳಿಗ್ಗೆ ನಗರದ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ಸಭಾಂಗಣದಲ್ಲಿ ಕಾರ ಹುಣ್ಣಿಮೆಯ ಪ್ರಯುಕ್ತ ಇಂದು ಬೆಳಿಗ್ಗೆ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಉಪಾಸನೆ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ ತಿಳಿಸಿದ್ದಾರೆ.
ಬಿ.ಸತ್ಯನಾರಾಯಣ ಮೂರ್ತಿ ಮತ್ತು ಕುಟುಂಬದವರ ಈ ತಿಂಗಳ ಪೂಜಾ ಸೇವೆಯ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗಾಯತ್ರಿ ಪರಿವಾರದ ನಿಟಕಪೂರ್ವ ಅಧ್ಯಕ್ಷರಾದ ಡಾ|| ಸುಶೀಲಮ್ಮ, ಅಧ್ಯಕ್ಷರಾದ ಡಾ. ರಮೇಶ್ ಪಟೇಲ್, ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಸಂಚಾಲಕರಾದ ಭಾವನ್ನಾರಾಯಣ ಸಮಿತಿ ಸದಸ್ಯರಾದ ವಿಜಯಕುಮಾರ್ ಶೆಟ್ಟಿ, ವಿಕ್ರಂ ಜೈನ್, ವಿ. ಕೃಷ್ಣಮೂರ್ತಿ, ಶಿವಕುಮಾರ್, ಸತೀಶ್ ಆರ್.ಎಂ. ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular