ಹಳೆಯಂಗಡಿ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಚಿತ್ರರವರು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀ ಕೆ.ಅಭಯಚಂದ್ರ ಜೈನ್ ಅವರನ್ನು ಮೂಡುಬಿದಿರೆಯಲ್ಲಿ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮಾಜಿ ಸಚಿವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಪಕ್ಷ ಸಂಘಟಿಸಿ ಹೇಳಿದರು. ನೂತನ ಪಂಚಾಯತ್ ಸದಸ್ಯರನ್ನು ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬರ್ನಾಡ್, ಹಳೆಯಂಗಡಿ ಪಂಚಾಯತ್ ಸದಸ್ಯರಾದ ಪದ್ಮಾವತಿ ಶೆಟ್ಟಿ, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ನೀತು ನಿರಂಜಲ ಅವರು ಉಪಸ್ಥಿತರಿದ್ದರು.